CrimeNational

ಶಾಸಕರ ಖರೀದಿ ಯತ್ನ ಪ್ರಕರಣ; ಸಂತೋಷ್‌ಗೆ ಹಿನ್ನಡೆ

ಹೈದರಾಬಾದ್‌; ತೆಲಂಗಾಣದಲ್ಲಿ ಟಿಆರ್‌ಎಸ್‌ ಪಾರ್ಟಿಯ ನಾಲ್ವರು ಶಾಸಕರ ಖರೀದಿ ಯತ್ನ ಆರೋಪ ಸಂಬಂಧ ಹೈದರಾಬಾದ್‌ ವಿಶೇಷ ತನಿಖಾ ತಂಡ ತನಿಖೆ ತೀವ್ರಗೊಳಿಸಿದೆ.  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್​ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.  ಇದನ್ನು ಪ್ರಶ್ನಿಸಿ ಸಂತೋಷ್‌ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಅದಕ್ಕೆ ಹಿನ್ನಡೆಯಾಗಿದೆ.

     ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡುವಂತೆ ಬಿ.ಎಲ್ ಸಂತೋಷ್ ತೆಲಂಗಾಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ತಡೆಯಾಜ್ಞೆ ನೀಡಲು ಕೋರ್ಟ್‌ ನಿರಾಕರಣೆ ಮಾಡಿದೆ. ಅಲ್ಲದೇ ನೋಟಿಸ್‌ ವಿಚಾರದಲ್ಲಿ ಸಹಕರಿಸುವಂತೆ ಸೂಚಿಸಿದೆ.

Share Post