CinemaCrime

ನಿರ್ಮಾಪಕನ ಕಚೇರಿ ಮುಂದೆ ಬೆತ್ತಲೆ ಕುಳಿತ ನಟಿ

ಹೈದರಾಬಾದ್‌; ತೆಲುಗು ನಟಿಯೊಬ್ಬರು ನಿರ್ಮಾಪಕರ ವಿರುದ್ಧ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಸುನಿತಾ ಬೋಯಾ ಎಂಬುವವರೇ ಪ್ರತಿಭಟನೆ ನಡೆಸಿದ ನಟಿ. 

ಬನ್ನಿ ವಾಸು ಅವರ ಗೀತಾ ಆರ್ಟ್ಸ್‌ ಕಚೇರಿ ಬಳಿ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬನ್ನಿ ವಾಸು ಅವರು ಚಿತ್ರ ನಿರ್ಮಾಪಕರು ಹಾಗೂ ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮೋಸ ಮಾಡಿದ್ದಾರೆ ಎಂದು ನಟಿ ಸುನಿತಾ ಬೋಯಾ ಆರೋಪಿಸಿದ್ದಾರೆ.

ಬನ್ನಿ ವಾಸು ಅವರು ನಿರ್ಮಿಸಿರುವ ಧಾರಾವಾಹಿಯಲ್ಲಿ ಸುನಿತಾ ನಟಿಸುತ್ತಿದ್ದರು. ಆದ್ರೆ ಅವರ ರೆಮ್ಯುನಿರೇಷನ್‌ ಕೊಟ್ಟಿರಲಿಲ್ಲವಂತೆ. ಇದರಿಂದಾಗಿ ಬದುಕು ನಡೆಸಲು ಕಷ್ಟವಾಗುತ್ತಿದೆ ಎಂದು ಆರೋಪಿಸಿ ಸುನಿತಾ ಬೋಯಾ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಬಂದು ಸಮಾಧಾನಪಡಿಸಿ, ಬಟ್ಟೆ ಹಾಕಿಸಿದ್ದಾರೆ.

 

Share Post