CrimeInternational

ಗಾಜಾಪಟ್ಟಿಯಲ್ಲಿ ಭಾರಿ ಅಗ್ನಿದುರಂತ; 21 ಮಂದಿ ಸಜೀವ ದಹನ

ಜೆರುಸಲೆಮ್; ಇಸ್ರೇಲ್‌ನ ಗಾಜಾಪಟ್ಟಿಯ ನಿರಾಶ್ರಿತರ ಶಿಬಿರದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಏಳು ಮಕ್ಕಳು ಸೇರಿ 21 ಮಂದಿ ಸಜೀವವಾಗಿ ದಹನವಾಗಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. 

4 ಅಂತಸ್ತಿನ ವಸತಿ ಕಟ್ಟಡದ ಕೊನೆಯ ಮಹಡಿಯಲ್ಲಿ ಭಾರಿ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಎಲ್ಲೆಡೆ ಆವರಿಸಿದೆ. ಅಗ್ನಿ ಶಾಮಕ ಸಿಬ್ಬಂದಿ ಒಂದು ಗಂಟೆ ಹೆಚ್ಚು ಕಾಲ ಶ್ರಮವಹಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.  ಕಟ್ಟಡದೊಳಗೆ ಭಾರಿ ಪ್ರಮಾಣದಲ್ಲಿ ಗ್ಯಾಸೋಲಿನ್ ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಬೆಂಕಿ ಎಲ್ಲೆಡೆ ಆವರಿಸಲು ಕಾರಣವಾಗಿದೆ.

ಕಟ್ಟಡದಲ್ಲಿ ಇದ್ದದ್ದೇ 21 ಮಂದಿ. ಎಲ್ಲರೂ ಕೂಡಾ ಸಜೀವವಾಗಿ ದಹನವಾಗಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಕಟ್ಟಡದಲ್ಲಿನ ಯಾರೊಬ್ಬರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ.

 

 

Share Post