800 ಕೋಟಿ ದಾಟಿದ ಪ್ರಪಂಚದ ಜನಸಂಖ್ಯೆ; ಏಷ್ಯಾದಲ್ಲಿ ಅತಿಹೆಚ್ಚು ಜನ
ನ್ಯೂಯಾರ್ಕ್; ಇಂದು ವಿಶ್ವದ ಜನಸಂಖ್ಯೆ ಎಂಟು ಶತಕೋಟಿ ತಲುಪಿದೆ. 700 ಕೋಟಿ ಜನಸಂಖ್ಯೆಯಿಂದ 800 ಕೋಟಿ ಜನಸಂಖ್ಯೆ ತಲುಪಲು 12 ವರ್ಷ ತೆಗೆದುಕೊಂಡಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 800 ಕೋಟಿಯ ಮಗು ಯಾವುದು ಅನ್ನೋದು ಇನ್ನೂ ಗೊತ್ತಾಗಿಲ್ಲ.
ವಿಶ್ವ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸಂಖ್ಯೆ ಏಷ್ಯಾದಲ್ಲೇ ಇದೆ. ಪೂರ್ವ ಮತ್ತು ಆಗ್ನೇಯ ಏಷ್ಯಾ ದಲ್ಲಿ 230 ಕೋಟಿ ಜನಸಂಖ್ಯೆ ಇದ್ದರೆ, ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ 21೦ ಕೋಟಿ ಜನರಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಹೀಗಿದ್ದರೂ ಕೂಡಾ ದಶಕದಿಂದ ದಶಕಕ್ಕೆ ಜನಸಂಖ್ಯೆ ಬೆಳವಣಿಗೆ ನೋಡಿದರೆ ಬೆಳವಣಿಕೆ ಕಡಿಮೆಯಾಗುತ್ತಿರುವ ಬಗ್ಗೆ ಸಮಾಧಾನವಾಗುತ್ತದೆ.
ವಿಶ್ವದ ಜನಸಂಖ್ಯೆ 7೦೦ ರಿಂದ 8೦೦ ಕೋಟಿಗೆ ತಲುಪಲು 12 ವರ್ಷ ತೆಗೆದುಕೊಂಡಿದೆ. ಇನ್ನೊಂದು ಶತಕೋಟಿ ಅಂದರೆ 9 ಶತಕೋಟಿ ತಲುಪಲು ಸುಮಾರು 15 ವರ್ಷ ತೆಗೆದುಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಪ್ರಕಾರ ಜಾಗತಿಕ ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆಯ ದರ ನಿಧಾನವಾಗುತ್ತಿದೆ ಅನ್ನೋದು ಗೊತ್ತಾಗುತ್ತದೆ.