ಐಸಿಸಿ ವಾಣಿಜ್ಯ ವ್ಯವಹಾರಗಳ ಸಮಿತಿ ಮುಖ್ಯಸ್ಥರಾಗಿ ಅಮಿತ್ ಶಾ ಪುತ್ರ
ದುಬೈ; ಐಸಿಸಿ ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಅವರರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಅವರಿಗೂ ಅತ್ಯುನ್ನತ ಹುದ್ದೆ ಸಿಕ್ಕಿದೆ. ಐಸಿಸಿ ವಾಣಿಜ್ಯ ವ್ಯವಹಾರಗಳ ಸಮಿತಿ ಮುಖ್ಯಸ್ಥರಾಗಿ ಜಯ್ ಶಾ ನೇಮಕವಾಗಿದ್ದಾರೆ.
ಜಯ್ ಶಾ ಅವರು ಬಿಸಿಸಿಐನಲ್ಲಿ 2ನೇ ಅವಧಿಗೆ ಕಾರ್ಯದರ್ಶಿಯಾಗಿದ್ದು, ಇದೀಗ ಅವರಿಗೆ ಮತ್ತೊಂದು ಹುದ್ದೆ ಸಿಕ್ಕಂತಾಗಿದೆ. ಜಯ್ ಶಾ ಅವರನ್ನು ಐಸಿಸಿ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದ್ದು, ಐಸಿಸಿ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.