ಮದುವೆಯಾಗಿದ್ದರೂ ಪ್ರಿಯಕರನ ಜೊತೆ ಡಿಂಗ್ಡಾಂಗ್; ಗಂಡನನ್ನೇ ಕೊಂದು ಜೈಲು ಸೇರಿದ ಆಂಟಿ
ಬೆಂಗಳೂರು; ಮದುವೆಯಾಗಿದ್ದರೂ ಮತ್ತೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮಾಡಬಾರದ ಕೆಲಸ ಮಾಡಿದ್ದಾಳೆ. ತಾಳಿ ಕಟ್ಟಿದ ಗಂಡನನ್ನೇ ಮದುವೆಯಾಗಿದ್ದಾಳೆ. ಬೆಂಗಳೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ರಾಕೇಶ್ ತೋಮಂಗ ಎಂಬುವವರೇ ಕೊಲೆಯಾದ ವ್ಯಕ್ತಿ. ನವೆಂಬರ್ ಆರರಂದು ಈ ಕೊಲೆ ನಡೆದಿದ್ದು, ಇದೀಗ ರಾಕೇಶ್ ಪತ್ನಿ ದೇಬಿತಬಾಂಗ್ ಹಾಗೂ ಆಕೆಯ ಪ್ರಿಯಕರ ಬಾಬು ಅಲಿನನ್ನು ಬಂಧಿಸಲಾಗಿದೆ. ದೇಬಿತಂಬಾಗ್ ಹಾಗೂ ಬಾಬು ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಗಂಡ ರಾಕೇಶ್ಗೆ ಗೊತ್ತಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನ ಜೊತೆ ಸೇರಿಕೊಂಡು ದೇಬಿತಂಬಾಗ್ ಅವರು ಗಂಡನನ್ನು ಕೊಲೆ ಮಾಡಿದ್ದಳು. ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.