CrimeDistricts

ಮೊಬೈಲ್‌ ಗೀಳಿಗೆ ಯುವತಿ ಬಲಿ; ಪಾಸ್‌ವರ್ಡ್‌ ಚೇಂಜ್‌ ಮಾಡಿದ್ದಕ್ಕೆ ಆತ್ಮಹತ್ಯೆ

ಚಿಕ್ಕಬಳ್ಳಾಪುರ; ಅಕ್ಕನಿಗೆ ಮೊಬೈಲ್‌ ಗೀಳು ಹೆಚ್ಚಾಗಿರುವುದನ್ನು ತಪ್ಪಿಸಲು ತಮ್ಮ ಮೊಬೈಲ್‌ ಪಾಸ್‌ವರ್ಡ್‌ ಚೇಂಜ್‌ ಮಾಡಿದ್ದಾನೆ. ಮೊಬೈಲ್‌ ಬಿಟ್ಟು ಇರಲಾರದ ಅಕ್ಕ, ಜೀವವನ್ನೇ ತೆಗೆದುಕೊಂಡಿದ್ದಾಳೆ. ಈ ಘಟನೆ ನಡೆದಿರೋದು ದೊಡ್ಡಬಳ್ಳಾಪುರ ನಗರದ ಗಾಣಿಗರ ಪೇಟೆಯಲ್ಲಿ.

ಹತ್ತೊಂಬತ್ತು ವರ್ಷದ ರುಚಿತಾ ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡವಳು. ಈಕೆಗೆ ಮೊಬೈಲ್‌ ಗೀಳು ತುಂಬಾನೇ ಹೆಚ್ಚಿತ್ತು. ಇದ್ರಿಂದಾಗಿ ರುಚಿತಾ ಸಹೋದರ ಮೊಬೈಲ್‌ ಪಾಸ್‌ವರ್ಡ್‌ ಚೇಂಜ್‌ ಮಾಡಿದ್ದ. ಪಾಸ್‌ವರ್ಡ್‌ ಕೊಡುವಂತೆ ಎಷ್ಟು ಕೇಳಿದರೂ ಆತ ಕೊಟ್ಟಿಲ್ಲ. ಇದಕ್ಕಾಗಿ ಇಬ್ಬರ ನಡುವೆ ಜಗಳ ಕೂಡಾ ನಡೆದಿದೆ. ಇದ್ರಿಂದ ಬೇಸತ್ತ ರುಚಿತ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಬಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post