CinemaNational

ಕಾಲು ಮುರಿದುಕೊಂಡ ಬಹುಭಾಷಾ ನಟಿ ತ್ರಿಷಾ; ವಿದೇಶದಲ್ಲಿ ನಡೆದಿದ್ದೇನು..?

ಚೆನ್ನೈ; ಬಹುಭಾಷಾ ನಟಿ ತ್ರಿಷಾ ಕೃಷ್ಣನ್‌ ಕಾಲು ಮುರಿದುಕೊಂಡಿದ್ದಾರೆ. ವಿದೇಶ ಪ್ರವಾಸ ತೆರಳಿದ್ದ ತ್ರಿಷಾ ಅವರು ಕಾಲು ಮುರಿದುಕೊಂಡು ಹಿಂತಿರುಗಿದ್ದಾರೆ. ಅವರೇ ತಮ್ಮ ಕಾಲಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಪಘಾತವಾದ ಕಾರಣ ವಿದೇಶದಿಂದ ವಾಪಸ್‌ ಬರಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ತ್ರಿಷಾ ಕಾಲಿನ ಫೋಟೋ ನೋಡುತ್ತಿದ್ದಂತೆ ಅಭಿಮಾನಿಗಳ ಆತಂಕ ವ್ಯಕ್ತಪಡಿಸಿದ್ದಾರೆ. ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಮಲಯಾಳಂ ನ ರಾಮ್‌ ಚಿತ್ರದ ಶೂಟಿಂಗ್‌ ಮುಗಿಸಿದ್ದ ತ್ರಿಷಾ ಯೂರೋಪ್‌ ದೇಶಗಳಿಗೆ ಪ್ರವಾಸ ಹೋಗಿದ್ದರು. ಈ ವೇಳೆ ಅಪಘಾತವಾಗಿದೆ ಎಂದು ತಿಳಿದುಬಂದಿದೆ.

Share Post