BengaluruCrime

ಪ್ರಯಾಣಿಕನ ಬಳಿ ಇದ್ದ 1.65 ಲಕ್ಷ ಕಳವು; ಆಟೋ ಚಾಲಕ ಅರೆಸ್ಟ್‌

ಬೆಂಗಳೂರು; ಪ್ರಯಾಣಿಕರೊಬ್ಬರಿಗೆ ಸೇರಿದ ಹಣವಿದ್ದ ಬ್ಯಾಗ್‌ ಕದ್ದಿದ್ದ ಆರೋಪದ ಮೇಲೆ ಮೂಡಲಪಾಳ್ಯದ ಆಟೋ ಡ್ರೈವರ್‌ ಪವನ್‌ ಎಂಬಾತನನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸೇನೆಯ ಅಧಿಕಾರಿಯೊಬ್ಬರ ಬ್ಯಾಗ್‌ ಕದ್ದಿದ್ದು, ಅದರಲ್ಲಿದ್ದ 1.65 ಲಕ್ಷ ರೂಪಾಯಿ ಕಳವು ಮಾಡಿದ್ದರು ಎಂದು ತಿಳಿದುಬಂದಿದೆ.

ಉತ್ತರ ಭಾರತದ ಮೂಲದವರಾದ ಸೇನೆಯ ಅಧಿಕಾರಿ ಅಕ್ಟೋಬರ್‌ 14ರಂದು ಬೆಂಗಳೂರಿಗೆ ಬಂದಿದ್ದರು. ಗಂಗಮ್ಮನ ಗುಡಿ ವೃತ್ತದಿಂದ ಶಾಂತಿನಗರಕ್ಕೆ ಆಟೋದಲ್ಲಿ ಹೋಗಿದ್ದರು. ಈ ವೇಳೆ ಗಂಗೇನಹಳ್ಳಿಯಲ್ಲಿ ಆಟೋ ನಿಲ್ಲಿಸುವಂತೆ ಹೇಳಿ ಕುಡಿಯಲು ನೀರು ತರಲು ಅವರು ಇಳಿದಿದ್ದಾರೆ. ಈ ವೇಳೆ ಆರೋಪಿ ಆಟೋದಲ್ಲಿದ್ದ ಬ್ಯಾಗ್‌ ಸಮೇತ ಅಲ್ಲಿಂದ ಎಸ್ಕೇಪ್‌ ಆಗಿದ್ದ ಎಂದು ತಿಳಿದುಬಂದಿದೆ. ಆಟೋ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ 1.65 ಲಕ್ಷ ರೂಪಾಯಿ ನಗದು, ಬಟ್ಟೆಗಳಿಂದ ಎರಡು ಬ್ಯಾಗ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಕೂಡಾ ಆರೋಪಿ ಚಂದ್ರ ಲೇಔಟ್‌ನಲ್ಲಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಬಂಧಿತನಾಗಿದ್ದ ಎಂದು ತಿಳಿದುಬಂದಿದೆ.

Share Post