CrimeDistricts

ಶೀಲ ಶಂಕೆ; ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಬಳ್ಳಾರಿ; ಪತ್ನಿಯ ಶೀಲ ಶಂಕಿಸಿದ ಪಾಪಿ ಪತಿ ಆಕೆಯನ್ನು ಕೊಲೆಗೈದು ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಜಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೇಖಾ ಎಂಬಾಕೆಯೇ ಕೊಲೆಯಾದ ದುರ್ದೈವಿ. ಪತಿ ಕುಮಾರಸ್ವಾಮಿ ಕುಡುಗೋಲಿನಿಂದ ರೇಖಾಳನ್ನು ಕೊಚ್ಚಿ ಕೊಲೆಗೈದಿದ್ದಾನೆ. ನಂತರ ಆತನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇವರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಐದು ಜನ ಮಕ್ಕಳಿದ್ದಾರೆ. ಆದ್ರೆ ಅದೇನಾಯ್ತೋ ಏನೋ ಇತ್ತೀಚೆಗೆ ಕುಮಾರಸ್ವಾಮಿ, ತನ್ನ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಗಲಾಟೆಗಳು ನಡೆದಿವೆ. ಇಂದು ಆತ ಕ್ರೂರವಾಗಿ ವರ್ತಿಸಿದ್ದು, ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ರಿಂದ ಐದು ಮಕ್ಕಳು ಬೀದಿಗೆ ಬಿದ್ದಂತಾಗಿದೆ.

Share Post