CrimeDistricts

ಮಳಿಗೆಯಲ್ಲಿ 6 ಲಕ್ಷ ರೂ. ಕಳ್ಳತನ; ನೌಕರನಿಂದಲೇ ಕೃತ್ಯ

ಹುಬ್ಬಳ್ಳಿ; ಹುಬ್ಬಳ್ಳಿಯ ಕೆ.ಕೆ. ಬಿಸಿನೆಸ್ ಸಲ್ಯೂಷನ್ ಜಿಯೋ ಮಾರ್ಟ್‌ ನಲ್ಲಿ ಕಳ್ಳತನವಾಗಿದೆ. ಈ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್‌ ಎಂಬಾತ ಆರು ಲಕ್ಷ ರೂಪಾಯಿ ಕಳವು ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಕ್ಯಾಶ್‌ ಬಾಕ್ಸ್‌ ಲಾಕ್‌ನ ಪಾಸ್‌ವರ್ಡ್‌ ತಿಳಿದಿದ್ದ ಪ್ರದೀಪ್‌, ಯಾರೂ ಇಲ್ಲದ ಸಮಯದಲ್ಲಿ ಅದನ್ನು ಓಪನ್‌ ಮಾಡಿ ಆರು ಲಕ್ಷ ರೂಪಾಯಿ ಎಗರಿಸಿದ್ದಾನೆ ಎಂದು ತಿಳಿದುಬಂದಿದೆ.

ಸುಳ್ಯ ರಸ್ತೆಯ ಮನೋಜಾ ಪಾರ್ಕ್‌ನಲ್ಲಿ ಈ ಮಳಿಗೆ ಇದೆ. ಈ ಮಳಿಗೆಯಲ್ಲಿ ಕಳ್ಳತನವಾಗಿದ್ದು, ಆರೋಪಿ ಪ್ರದೀಪ್‌ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post