ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆ; ಬಿಜೆಪಿಯಿಂದ ಗೌರವ ಯಾತ್ರೆ ಆರಂಭ
ಅಹಮದಾಬಾದ್; ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ಜನ ಸಂಘಟನೆಗೆ ಒತ್ತು ನೀಡುತ್ತಿವೆ. ಆಡಳಿತಾರೂಢ ಬಿಜೆಪಿ ಪಕ್ಷ ಕೂಡಾ ಪ್ರಚಾರ ಯಾತ್ರೆ ಕೈಗೊಂಡಿದೆ. ಅದಕ್ಕೆ ಗುಜರಾತ್ ಗೌರವ ಯಾತ್ರೆ ಎಂದು ಹೆಸರಿಡಲಾಗಿದೆ. ಇಂದಿನಿಂದ ಈ ಯಾತ್ರೆ ಐದು ಮಾರ್ಗಗಳಲ್ಲಿ ಸಂಚಾರ ಮಾಡಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದ್ವಾರಕಾದಿಂದ ಇಂದು ಹೊರಡುವ ಒಂದು ಮಾರ್ಗದ ಯಾತ್ರೆಗೆ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಮತ್ತೊಂದು ಯಾತ್ರೆ ಮಹೆಸಾಣಾ ಜಿಲ್ಲೆಯ ಬೆಚರಾಜೀಯಿಂದ ಶುರುವಾಗಲಿದ್ದು, ಇಲ್ಲಿ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ನೇತೃತ್ವ ವಹಿಸಲಿದ್ದಾರೆ. ನಾಳೆ ಮೂರು ಮಾರ್ಗಗಳಲ್ಲಿ ಯಾತ್ರೆ ನಡೆಯಲಿದ್ದು, ಅದಕ್ಕೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
2002ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಗೌರವ ಯಾತ್ರೆ ನಡೆಸಿದ್ದರು. 2017ರ ವಿಧಾನಸಭೆ ಚುನಾವಣೆ ವೇಳೆಯೂ ಎರಡನೇ ‘ಗೌರವ ಯಾತ್ರೆ’ ನಡೆಸಲಾಗಿತ್ತು.