National

ಕಾರುಗಳಲ್ಲಿ ಏರ್‌ಬ್ಯಾಗ್‌ ಕಡ್ಡಾಯ ವಿಚಾರ; ಒಂದು ವರ್ಷ ಮುಂದೂಡಿಕೆ

ನವದೆಹಲಿ; ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳು ಕಡ್ಡಾಯ ಮಾಡುವ ಅವಧಿಯನ್ನು ಮುಂದಿನ ಒಂದು ವರ್ಷ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು, ಅಕ್ಟೋಬರ್ 2023 ರಿಂದ ಆರು ಏರ್ ಬ್ಯಾಗ್ ಕಡ್ಡಾಯ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಇದೇ ಅಕ್ಟೋಬರ್ 1 ರಿಂದ 8 ಸೀಟುಗಳು ಇರುವಂತಹ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳು ಇರಲೇಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ಈ ಕೂಡಲೇ ಏರ್‌ಬ್ಯಾಗ್‌ ಕಡ್ಡಾಯ ಮಾಡುವ ಪ್ರಸ್ತಾವನೆಯನ್ನು ಒಂದು ವರ್ಷ ಮುಂದೂಡುತ್ತಿದ್ದೇವೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Share Post