CinemaHealthNational

ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು ತಾಯಿ ನಿಧನ

ಹೈದರಾಬಾದ್‌; ತೆಲುಗಿನ ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ, ಖ್ಯಾತ ನಟ ಮಹೇಶ್ ಬಾಬು ಅವರ ತಾಯಿ ಇಂದಿರಾದೇವಿ (70) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇಂದಿರಾದೇವಿ ಆಕೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಅವರು ನಿಧನರಾಗಿದ್ದಾರೆ.

ಇಂದಿರಾ ದೇವಿ ಅವರು ‘ಸೂಪರ್ ಸ್ಟಾರ್’ ಕೃಷ್ಣ ಅವರ ಮೊದಲ ಪತ್ನಿ. ಅವರಿಗೆ ಐವರು ಮಕ್ಕಳಿದ್ದಾರೆ.  ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿಯವರು ಇಂದಿರಾದೇವಿಯವರ ಮಕ್ಕಳು. ಈ ಪೈಕಿ ರಮೇಶ್ ಬಾಬು ಕೆಲ ದಿನಗಳ ಹಿಂದೆ ನಿಧನರಾಗಿದ್ದರು.

ಹಲವು ದಿನಗಳಿಂದ ಇಂದಿರಾ ದೇವಿ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಬೆಳಗಿನ ಜಾವ 4 ಗಂಟೆಗೆ ಇಂದಿರಾ ದೇವಿ ನಿಧನರಾದರು ಎಂದು ಮಹೇಶ್ ಬಾಬು ಕುಟುಂಬದವರು ತಿಳಿಸಿದ್ದಾರೆ.

Share Post