ಅನಿಲ್ ಅಂಬಾನಿಗೆ ಬಿಗ್ ರಿಲೀಫ್ ಕೊಟ್ಟ ಬಾಂಬೆ ಹೈಕೋರ್ಟ್
ಮುಂಬೈ; ಅನಿಲ್ ಅಂಬಾನಿಗೆ ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅನಿಲ್ ಅಂಬಾನಿ ವಿರುದ್ಧ ಬಲವಂತವಾಗಿ ಯಾವುದೇ ಕ್ರಮ ಕೈಗೊಳ್ಳದಂತೆ ಆದಾಯ ತೆರಿಗೆ ಇಲಾಖೆಗೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ
420 ಕೋಟಿ ತೆರಿಗೆ ವಂಚನೆ ಆರೋಪ ಅನಿಲ್ ಅಂಬಾನಿ ಮೇಲಿದೆ. ಈ ಸಂಬಂಧ ಅನಿಲ್ ಅಂಬಾನಿ ವಿರುದ್ಧ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು. ಆದ್ರೆ ಇದಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ನವೆಂಬರ್ 17 ರವೆರೆಗೆ ಅನಿಲ್ ಅಂಬಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.