ದೆಹಲಿಯ ಆಜಾದ್ ನಗರದಲ್ಲಿ ಕುಸಿದುಬಿದ್ದ ಕಟ್ಟಡ; ಐವರು ಸಿಲುಕಿರುವ ಶಂಕೆ
ನವದೆಹಲಿ; ಇಲ್ಲಿನ ಆಜಾದ್ ಮಾರುಕಟ್ಟೆ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದುಬಿದ್ದಿದೆ. ಇಂದು ಬೆಳಗ್ಗೆ ಕಟ್ಟಡದ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಅವಶೇಷಗಳಡಿ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಕಟ್ಟಡದ ಕುಸಿತವಾದಾಗ ಇಬ್ಬರು ಹೊರಗೆ ಓಡಿಬಂದಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಐವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜೆಸಿಬಿಗಳ ಮೂಲಕ ಅವಶೇಷಗಳನ್ನು ತೆರವುಗೊಳಿಸಿ, ಸಿಲುಕಿದ್ದವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.