CrimeDistricts

ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಕೇಸ್‌; ವಿದ್ಯಾರ್ಥಿನಿಯರ ಹೇಳಿಕೆ ಮೇಲೆ ಶ್ರೀಗಳ ಭವಿಷ್ಯ

ಚಿತ್ರದುರ್ಗ; ಮರುಘಾ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಕೋರ್ಟ್‌ನಲ್ಲಿ ವಿದ್ಯಾರ್ಥಿನಿಯರು ನೀಡುವ ಹೇಳಿಕೆ ಮೇಲೆ ಶ್ರೀಗಳ ಭವಿಷ್ಯ ನಿಂತಿದೆ. ವಿದ್ಯಾರ್ಥಿನಿಯರು ಈ ಹಿಂದೆ ಹೇಳಿದಂತೆ ಕೋರ್ಟ್‌ನಲ್ಲಿ ಹೇಳಿಕೆ ನೀಡಿದರೆ ಶ್ರೀಗಳ ಬಂದನ ಅನಿವಾರ್ಯವಾಗಬಹುದು ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಮರುಘಾ ಶ್ರೀಗಳು ತಡರಾತ್ರಿಯಿಂದ ಮಠದಲ್ಲಿ ಇಲ್ಲ ಎನ್ನಲಾಗಿದೆ. ಆಡಳಿತಾಧಿಕಾರಿ ಜೊತೆ ರಾಜಿ ಸಂಧಾನ ವಿಫಲವಾಗಿದ್ದರಿಂದ ತಡರಾತ್ರಿ ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿರುವ ಸಾಧ್ಯಗಳಿವೆ. ಈ ಹಿನ್ನೆಲೆಯಲ್ಲಿ ಮಠದ ಭಕ್ತರು ಮೌನಕ್ಕೆ ಜಾರಿದ್ದಾರೆ. ಇತ್ತ ಪ್ರಕರಣ ಸಂಬಂಧ ಇಂದು ಸಂತ್ರಸ್ತ ಬಾಲಕಿಯರು ಇಂದು ಬೆಳಗ್ಗೆ 10 ಗಂಟೆಗೆ ಜಡ್ಜ್ ಮುಂದೆ ಹಾಜರಾಗಲಿದ್ದಾರೆ. ನಿನ್ನೆ ಸಿಡಬ್ಲೂಸಿ ಕಮಿಟಿ ಎದುರು ಹೇಳಿಕೆ ದಾಖಲು ಮಾಡಲಾಗಿತ್ತು. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆದಿತ್ತು. ಸಂತ್ರಸ್ತ ಬಾಲಕಿಯರು ಮೈಸೂರಿನಲ್ಲಿ ಹೇಳಿದಂತೆ ಚಿತ್ರದುರ್ಗದ ಸಿಡಬ್ಲೂಸಿಮುಂದೆಯೂ ಅದೇ ಹೇಳಿಕೆ ನೀಡಿದ್ದಾರೆ.

 

Share Post