CrimeNational

ಜಾರ್ಖಂಡ್‌ನಲ್ಲಿ ವರುಣನ ರೌದ್ರಾವತಾರ; ಆರು ಮಕ್ಕಳು ನೀರುಪಾಲು

ಮೇದಿನಿನಗರ; ಜಾರ್ಖಂಡ್‌ನ ಪಾಲಮು ಮತ್ತು ಹಝಾರಿಬಾಗ್ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾನುವಾರ ವಿಪರೀತ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಇದೇ ವೇಳೆ ಆರು ಮಕ್ಕಳು ನೀರುಪಾಲಾಗಿದ್ದಾರೆ.

ಮಳೆಯಿಂದ ಉಂಟಾದ ಎರಡು ಪ್ರತ್ಯೇಕ ಅವಘಡಗಳು ನಡೆದಿದ್ದು ಒಟ್ಟು ಆರು ಮಕ್ಕಳು ನೀರುಪಾಲಾಗಿದ್ದಾರೆ. ಪಾಲಮು ಜಿಲ್ಲೆ ಸತ್‌ಬಾರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಫೈಟ್ ಗಣಿಯೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಮೂವರು ಮಕ್ಕಳು ನೀರುಪಾಲಾಗಿದ್ದಾರೆ. ನೀರಿಗೆ ಇಳಿದಿದ್ದ ಓರ್ವ ಬಾಲಕನನ್ನು ರಕ್ಷಿಸಲು ಮತ್ತಿಬ್ಬರು ಬಾಲಕರು ಪ್ರಯತ್ನಿಸಿದ್ದು, ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ.

ಇನ್ನು ಹಝಾರಿಬಾಗ್‌ನಲ್ಲಿ ನಡೆದ ಮತ್ತೊಂದು ದುರಂತದಲ್ಲಿ, ಬಿಎಸ್‌ಎಫ್ ತರಬೇತಿ ಶಿಬಿರದ ಸಮೀಪವಿದ್ದ ಜಲಾಶಯಕ್ಕೆ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂವರು ಕೂಡ ಬಿಎಸ್‌ಎಫ್ ಸಿಬ್ಬಂದಿ ಮಕ್ಕಳು ಎಂದು ಪೊಲೀಸರು ತಿಳಿಸಿದ್ದಾರೆ.

Share Post