ಸುಳ್ಳು ಸುದ್ದಿ ಪ್ರಸಾರ, ದೇಶದ ಭದ್ರತೆಗೆ ಧಕ್ಕೆ; 8 ಯೂಟ್ಯೂಬ್ ಚಾನಲ್‌ಗಳು ಬಂದ್..!
ನವದೆಹಲಿ; ಸುಳ್ಳು ಸುದ್ದಿ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುತ್ತಿರುವುದರಿಂದ ಭಾರತಕ್ಕೆ ಸೇರಿದ 7 ಹಾಗೂ ಪಾಕಿಸ್ತಾನದ 1 ಯೂಟ್ಯೂಬ್ ಚಾನಲ್‌ಗಳನ್ನು ಬಂದ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದನ್ವಯ ಗೂಗಲ್ ಒಡೆತನದ ಯೂಟ್ಯೂಬ್ ಈ ಕ್ರಮ ಕೈಗೊಂಡಿದೆ. ಬಂದ್ ಆಗಿರುವ ಚಾನಲ್‌ಗಳು ಕೋಟಿ ಕೋಟಿ ವೀಕ್ಷಕರನ್ನು ಹೊಂದಿದ್ದು, ಲಕ್ಷಾಂತರ ಚಂದಾದಾರರನ್ನು ಹೊಂದಿದ್ದವು ಎಂದು ತಿಳಿದುಬಂದಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಪ್ರಸಾರ ಇಲಾಖೆ ತಿಳಿಸಿದೆ. ಈ 8 ಚಾನಲ್‌ಗಳು ತಪ್ಪು ಮಾಹಿತಿ, ದ್ವೇಷ ಹರಡುವಿಕೆ, ರಾಷ್ಟ್ರೀಯ ಭದ್ರತೆ ಬಗ್ಗೆ ಸವಾಲು, ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವುದು, ಕೋಮು ಭಾವನೆ ಕೆರಳಿಸುವುದು, ವಿದೇಶಾಂಗ ನೀತಿಗೆ ದಕ್ಕೆ ತರುತ್ತಿದ್ದವು ಎಂದು ತಿಳಿದುಬಂದಿದೆ.
ನಿಷೇಧಕ್ಕೆ ಒಳಗಾದ ಚಾನಲ್‌ಗಳು
ಲೋಕತಂತ್ರ ಟಿ.ವಿ –12 ಲಕ್ಷ ಚಂದಾದಾರರು
ಯು ಆ್ಯಂಡ್ ವಿ ಟಿವಿ– 10.20 ಲಕ್ಷ ಚಂದಾದಾರರು
ಎಎಂ ರಾಜ್ವಿ ಚಾನಲ್– 95000 ಚಂದಾದಾರರು
ಗೌರವಶಾಲಿ– 7 ಲಕ್ಷ ಚಂದಾದಾರರು
ಸೀಟಾಪ್ 5ಟಿಎಚ್– 20 ಲಕ್ಷ ಚಂದಾದಾರರು
ಸರ್ಕಾರಿ ಅಪ್ಡೇಟ್– 90 ಸಾವಿರ ಚಂದಾದಾರರು
ಸಬ್ ಕುಚ್ ದೇಕೊ– 20 ಲಕ್ಷ ಚಂದಾದಾರರು
ನ್ಯೂಸ್ ಕಿ ದುನಿಯಾ (ಪಾಕಿಸ್ತಾನದ ಚಾನಲ್)– 20 ಲಕ್ಷ ಚಂದಾದಾರರು