ಮಹಾರಾಷ್ಟ್ರದಲ್ಲಿ ಐಟಿ ದಾಳಿ; 56 ಕೋಟಿ ನಗದು, 32 ಕೆಜಿ ಚಿನ್ನ ಜಪ್ತಿ
ಮುಂಬೈ; ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಜಲ್ನಾದಲ್ಲಿ ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಎರಡು ಉದ್ಯಮಗಳ ಮೇಲೆ ಆಗಸ್ಟ್ 1 ಮತ್ತು 8ರ ನಡುವೆ ಆದಾಯ ತೆರಿಗೆ ನಡೆಸಿದೆ. ಈ ದಾಳಿಯಲ್ಲಿ 390 ಕೋಟಿ ರೂ. ಮೊತ್ತದ ಬೇನಾಮಿ ಆಸ್ತಿ ಪತ್ತೆಯಾಗಿದ್ದು, ಇದೀಗ ಅದನ್ನು ವಶಪಡಿಸಿಕೊಳ್ಳಲಾಗಿದೆ.
ನಾಸಿಕ್ ವಿಭಾಗದ ಆದಾಯ ತೆರಿಗೆ ಇಲಾಖೆಯು ಆಗಸ್ಟ್ ಮೊದಲ ವಾರದಲ್ಲಿ ಜಲ್ನಾ ಮತ್ತು ಔರಂಗಾಬಾದ್ ನಗರಗಳಲ್ಲಿರುವ ಉಕ್ಕು ತಯಾರಿಕರ ಕಾರ್ಖಾನೆಗಳು, ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 390 ಕೋಟಿ ಮೌಲ್ಯದ ಲೆಕ್ಕವಿರದಷ್ಟು ಆಸ್ತಿ ಪತ್ತೆ ಮಾಡಿದೆ.
ಈ ದಾಳಿಯಲ್ಲಿ ಸುಮಾರು 58 ಕೋಟಿ ರೂಪಾಯಿ ನಗದು, 32 ಕೆಜಿ ಚಿನ್ನ ಸೇರಿದಂತೆ, 14 ಕೋಟಿ ರೂ. ಮೌಲ್ಯದ ಮುತ್ತುಗಳು ಮತ್ತು ವಜ್ರಗಳು ಹೀಗೆ ಒಟ್ಟು 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ದಾಳಿಯ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವು ಆಸ್ತಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದೆ ಮತ್ತು ಇವುಗಳ ಪರಿಶೀಲನೆ ನಡೆಸಲಾಗುತ್ತಿದೆ. ವಶಪಡಿಸಿಕೊಂಡ ಹಣವನ್ನು ಎಣಿಸಲು ಇಲಾಖೆ 13 ಗಂಟೆಗಳ ಸಮಯ ತೆಗೆದುಕೊಂಡಿತು. ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆ ನಡೆಸಲು ವಿವಿಧ ರಾಜ್ಯಗಳ 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು.