CinemaNational

ಚಿತ್ರೀಕರಣದ ವೇಳೆ ಅವಘಡ; ನಟ ವಿಶಾಲ್‌ಗೆ ಗಂಭೀರ ಗಾಯ

ಚೆನ್ನೈ; ತಮಿಳಿನ ಮಾರ್ಕ್‌ ಆ್ಯಂಟನಿ ಸಿನಿಮಾದ ಚಿತ್ರೀಕರಣ ವೇಳೆ ನಟ ವಿಶಾಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ವಿಶಾಲ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಮಾರ್ಕ್‌ ಆ್ಯಂಟನಿʼ ಚಿತ್ರದ ಶೂಟಿಂಗ್‌ ವೇಳೆ ಈ ಅವಘಡ ಸಂಭವಿಸಿದೆ. ಫೈಟ್‌ವೊಂದರ ಚಿತ್ರೀಕರಣ ಸಮಯದಲ್ಲಿ ವಿಶಾಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ

ಅದಿಕ್ ರವಿಚಂದ್ರನ್ ಅವರು ಮಾರ್ಕ್‌ ಆ್ಯಂಟನಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟ ಹಾಗೂ ನಿರ್ದೇಶಕ ಸೂರ್ಯಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿತು ವರ್ಮ ನಾಯಕಿಯಾಗಿರುವ ಈ ಸಿನಿಮಾಗೆ ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ವಿನೋದ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೂಡಾ ನಟ ವಿಶಾಲ್‌ ಚಿತ್ರೀಕರಣದ ವೇಳೆ ಅಸ್ವಸ್ಥಗೊಂಡಿದ್ದರು.

Share Post