BengaluruCrime

ನಕಲಿ ಛಾಪಾಕಾಗದ ಬಳಸಿ ವಂಚನೆ; 11 ಆರೋಪಿಗಳು ಅರೆಸ್ಟ್‌

ಬೆಂಗಳೂರು; ಬೆಂಗಳೂರು ಸಿಸಿಬಿ ಪೊಲೀಸರು ನಕಲಿ ಛಾಪಾಕಾಗದ ಬಳಸಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದಾರೆ. ಹನ್ನೊಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರಿಂದ 2664 ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಒಡೆಯರ ಕಾಲದಿಂದ ಹಿಡಿದು ಇಲ್ಲಿಯವರೆಗಿನ ಛಾಪಾ ಕಾಗದಗಳನ್ನು ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ. ಹಳೆಯ ಛಾಪಾ ಕಾಗದಗಳನ್ನು ಬಳಸಿಕೊಂಡು ಜಿಪಿಎ ಮಾಡಿಸಿಕೊಂಡಂತೆ ಸೃಷ್ಟಿ ಮಾಡಿ ವಂಚನೆ ಮಾಡಲಾಗುತ್ತಿತ್ತು. ಈ ರೀತಿ ನಾಲ್ಕು ಕಡೆ ವಂಚಿಸಲಾಗಿದೆ ಎಂದು ತಿಳಿದುಬಂದಿದೆ.

ಛಾಪಾ ಕಾಗದಗಳನ್ನು ನಕಲು ಮಾಡಿದ್ದರಿಂದಾಗಿ ದಶಕಗಳ ಹಿಂದೆಯೇ ಛಾಪಾ ಕಾಗದಗಳ ಮಾರಾಟ ನಿಲ್ಲಿಸಲಾಗಿತ್ತು. ಆನ್‌ಲೈನ್‌ನಲ್ಲಿ ಸ್ಟಾಂಪ್‌ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಹಳೆಯ ಛಾಪಾ ಕಾಗದಗಳನ್ನಿಟ್ಟುಕೊಂಡು 1990, 1995ರಲ್ಲಿ ಜಿಪಿಎ ಮಾಡಿಕೊಂಡಂತೆ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದರೆಂದು ತಿಳಿದುಬಂದಿದೆ.

 

Share Post