EconomyNational

ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭ ಸುದ್ದಿ; ಡಾಲರ್‌ ಎದುರು ರೂಪಾಯಿ ಬೆಲೆ ಹೆಚ್ಚಳ

ಮುಂಬೈ; ಡಾಲರ್‌ ಎದುರು ನಿರಂತರವಾಗಿ ಕುಸಿಯುತ್ತಾ ಬಂದಿದ್ದ ರೂಪಾಯಿ ಈಗ ಚೇತರಿಕೆ ಕಂಡಿದೆ. ವಿತ್ತೀಯ ನೀತಿಯಲ್ಲಿ ಆರ್‌ಬಿಐ ಇಂದು ಕೈಗೊಳ್ಳಲಿರುವ ನಿರ್ಧಾರದ ನಿರೀಕ್ಷೆ, ತೈಲ ಬೆಲೆ ಕುಸಿತ, ಡಾಲರ್‌ ಅಪಮೌಲ್ಯದ ಹಿನ್ನೆಲೆಯಲ್ಲಿ ರೂಪಾಯಿ ಗಳಿಕೆ ಹೆಚ್ಚಿಸಿಕೊಂಡಿದೆ.
ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ 46 ಪೈಸೆ ಗಳಿಕೆ ಕಂಡು, 78.94ರಂತೆ ವಹಿವಾಟುಗೊಂಡಿತು‌. ಹಿಂದಿನ ದಿನದ ವಹಿವಾಟು ಮುಕ್ತಾಯದ ವೇಳೆ ರೂಪಾಯಿ 79.4650ರಷ್ಟು ಇತ್ತು.

ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಮೂರು ದಿನಗಳ ಸಭೆಯ ಅಂತ್ಯದಲ್ಲಿ ಆರ್‌ಬಿಐ ಪ್ರಕಟಿಸಲಿರುವ ವಿತ್ತೀಯ ನೀತಿ ನಿರ್ಧಾರವನ್ನು ಮಾರುಕಟ್ಟೆ ಕುತೂಹಲದಿಂದ ಎದುರು ನೋಡುತ್ತಿದೆ. ಆರ್‌ಬಿಐ ತನ್ನ ಪ್ರಮುಖ ಬಡ್ಡಿದರವನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.

Share Post