ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ತಬ್ಬಿಕೊಂಡಿದ್ದೇಕೆ..?
ದಾವಣಗೆರೆ; ನಿನ್ನೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಶುಭ ಕೋರಿದ್ದರು. ಇದು ಇಬ್ಬರು ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬಿಂಬಿಸಿತ್ತು. ಆದ್ರೆ, ನಿಜ ಬೇರೇನೇ ಇತ್ತು. ವೇದಿಕೆಯಲ್ಲಿ ಕುಳಿತಿದ್ದ ರಾಹುಲ್ ಗಾಂಧಿಯವರು ತಬ್ಬಿಕೊಳ್ಳುವಂತೆ ಸನ್ನೆ ಮಾಡಿದ್ದರು. ಅದಾದ ಮೇಲೆ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡರು.
ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದರು. ಅನಂತರ ಸಿದ್ದರಾಮಯ್ಯ ಅವರ ಬಳಿಗೆ ಬಂದ ಡಿ.ಕೆ.ಶಿವಕುಮಾರ್, ಅವರಿಗೆ ಶಾಲು ಹೊದಿಸಿ ಶುಭ ಕೋರಿದರು. ಅನಂತರ ಹಿಂದಗಡೆಯಿಂದ ರಾಹುಲ್ ಗಾಂಧಿಯವರ ಕಡೆಗೆ ನೋಡಿದರು. ಈ ವೇಳೆ ರಾಹುಲ್ ಗಾಂಧಿ ತಬ್ಬಿಕೊಂಡು ವಿಶ್ ಮಾಡುವಂತೆ ಕೈ ಸನ್ನೆ ಮಾಡಿದರು.