International

ಜಪಾನ್‌ ಮಾಜಿ ಪ್ರಧಾನಿ ಮೇಲೆ ಗುಂಡಿನ ದಾಳಿ; ಆಸ್ಪತ್ರೆಗೆ ದಾಖಲು

ಟೊಕಿಯೊ; ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಗೊಂಡು ರಕ್ತಸ್ರಾವದಿಂದ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಕ್ರಮದ ವೇಳೆ ಗುಂಡು ಹಾರಿದ ಶಬ್ದ ಕೇಳಿಸಿತು. ಕ್ಷಣಾರ್ಧದಲ್ಲಿ ಅಬೆ ರಕ್ತಸ್ರಾವದಿಂದ ನೆಲಕ್ಕೆ ಬಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

Share Post