ಸೇನೆಯಲ್ಲಿ ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳು
ಬೆಂಗಳೂರು; ಭಾರತದಲ್ಲಿ ತಯಾರಾದ ಮಿಲಿಟರಿ ವಾಹನಗಳನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಈ ಪದಾತಿ ದಳದ ಯುದ್ಧ ವಾಹನಗಳನ್ನು ಬಹಳ ಸುಲಭವಾಗಿ ಓಡಿಸಬಹುದು ಎಂದು ಸೇನೆ ಹೇಳಿದೆ. ಚಾಲಕ 1,800 ಮೀಟರ್ ವರೆಗೆ ನೋಡಬಹುದು ಎಂದು ತಿಳಿದುಬಂದಿದೆ.
ವಾಹನದಲ್ಲಿ ಕುಳಿತು ಹೊರಗಿನಿಂದ ಶಸ್ತ್ರಾಸ್ತ್ರಗಳನ್ನು ನಿರ್ವಹಿಸಬಹುದು ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಈ ವಾಹನಗಳನ್ನು DRDO ಮತ್ತು ಟಾಟಾ ಗ್ರೂಪ್ ಜಂಟಿಯಾಗಿ ವಿನ್ಯಾಸಗೊಳಿಸಿವೆ.