Crime

ಬಿಯರ್‌ನಿಂದ ಶಿವಲಿಂಗಕ್ಕೆ ಅಭಿಷೇಕ; ಚಂಡಿಗಢದಲ್ಲಿ ಇದೆಂಥಾ ವಿಕೃತಿ..?

ಚಂಡಿಗಢ; ಪುಂಡ ಯುವಕರು ಬಿಯರ್‌ನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದು, ಅದರ ಫೋಟೋ ನೋಡಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.  ಕೆಲವು ಕುಡುಕರು, ವಿಕೃತ ಮನಸ್ಸಿನವರು ಈ ಹೀನ ಕೆಲಸ ಮಾಡಿದ್ದಾರೆ. ಅವರನ್ನು ಬಂಧಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.

ಯುವಕರಿಬ್ಬರು ಕಾಲುವೆ ದಡದಲ್ಲಿ ಕುಳಿತು ತಾವು ಕುಡಿದ ಬಿಯರ್ ನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ. ಕಾಲುವೆ ದಡದಲ್ಲಿ ಕುಳಿತ ಒಬ್ಬ ಬಿಯರ್ ಕುಡಿಯುತ್ತಿದ್ದರೆ, ಮತ್ತೊಬ್ಬ ಶಿವಲಿಂಗಕ್ಕೆ ಬಿಯರ್ ನಿಂದ ಅಭಿಷೇಕ ಮಾಡುತ್ತಿದ್ದಾನೆ. ಇವರಿಬ್ಬರ ವಿಕೃತ ವರ್ತನೆ ವಿರುದ್ಧ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಆ ಇಬ್ಬರು ಯುವಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

 

Share Post