Districts

2024ರ ಚುನಾವಣೆ ನಂತರ ಉತ್ತರ ಕರ್ನಾಟಕ ಪ್ರತ್ಯೇಕವಾಗುತ್ತೆ; ಉಮೇಶ್‌ ಕತ್ತಿ

ಬೆಳಗಾವಿ; ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಬಿಜೆಪಿ ನಾಯಕ ಹಾಗೂ ಸಚಿವ ಉಮೇಶ್‌ ಕತ್ತಿ ಆಗಾಗ ಮಾತನಾಡುತ್ತಲೇ ಇರುತ್ತಾರೆ. ಇದೀಗ ಮತ್ತೆ ಅಂತದ್ದೇ ಹೇಳಿಕೆ ಕೊಟ್ಟಿದ್ದಾರೆ. 2024ರ ಲೋಕಸಭಾ ಚುನಾವಣೆಯ ನಂತರ ಉತ್ತರ ಕರ್ನಾಟಕದ ಭಾಗಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಸಿಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೆ ಅವರು ವಿವಾದಕ್ಕೀಡಾಗಿದ್ದಾರೆ.

 

ಬೆಳಗಾವಿಯಲ್ಲಿ ಬಾರ್ ಅಸೋಸಿಯೇಷನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024ರ ನಂತರ ದೇಶದಲ್ಲಿ 50 ಹೊಸ ರಾಜ್ಯಗಳು ಉದಯಿಸಲಿವೆ. ಆಗ ಕರ್ನಾಟಕವೂ ಎರಡು ಭಾಗವಾಗಲಿದೆ ಎಂದಿದ್ದಾರೆ. ಧಾರವಾಡದಲ್ಲಿ ಹೈಕೋರ್ಟ್, ಬೆಳಗಾವಿಯಲ್ಲಿ ಸುವರ್ಣಸೌಧ ಇದೆ. ಪ್ರತ್ಯೇಕ ರಾಜ್ಯಕ್ಕೆ ಬೇಕಾದ ಮೂಲಸೌಕರ್ಯ ನಮ್ಮಲ್ಲಿವೆ ಎಂದು ಕತ್ತಿ ಇದೇ ವೇಳೆ ಹೇಳಿದ್ದಾರೆ.

Share Post