National

ಅಗ್ನೀವೀರ್‌ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರಸರ್ಕಾರ

ನವದೆಹಲಿ: ಅಗ್ನಿಪಥ್‌ ಯೋಜನೆ ವಿರುದ್ಧದ ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಅಗ್ನಿವೀರ್‌ ನೇಮಕಾತಿಗೆ ನೋಟಿಫಿಕೇಶನ್‌  ಹೊರಡಿಸಿದೆ.  joinindianarmy.nic.in ವೆಬ್‌ಸೈಟ್‌ನಲ್ಲಿನೋಟಿಫಿಕೇಶನ್‌ ಅಪ್ಲೋಡ್‌ ಮಾಡಲಾಗಿದೆ. ಜುಲೈನಿಂದ  ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ  ಸೇನಾ ನೇಮಕಾತಿ ರ‍್ಯಾಲಿ ಆಗಸ್ಟ್‌ ಮಧ್ಯದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಜನರಲ್‌ ಡ್ಯೂಟಿ, ಟೆಕ್‌, ಕ್ಲರ್ಕ್‌, ಸ್ಟೋರ್‌ ಕೀಪರ್‌ ಟೆಕ್ನಿಕಲ್‌, ಅಗ್ನಿವೀರ್‌ ಟ್ರೇಡ್ಸ್‌ಮನ್‌ ಹುದ್ದೆಗಳಿಗೆ ಅರ್ಜಿ ಆಹ್ವನಿಸಲಾಗಿದೆ. ಅಗ್ನಿವೀರ್‌ ಟ್ರೇಡ್ಸ್‌ಮನ್‌ ಹುದ್ದೆಗೆ 8ನೇ ತರಗತಿ ಕನಿಷ್ಠ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಕನಿಷ್ಠ 17 ವರ್ಷ 6 ತಿಂಗಳು ಗರಿಷ್ಠ 23 ವರ್ಷದ ಒಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆಯ ವೇಳೆಎನ್‌ಸಿಸಿ ಸಿ ಸರ್ಟಿಫಿಕೇಟ್‌ ಇದ್ದವರಿಗೆ 15 ಬೋನಸ್‌ ಅಂಕ ನೀಡಲಾಗುತ್ತದಂತೆ.
Share Post