BengaluruPolitics

ಖರ್ಗೆ ಅವರನ್ನು ವಿಚಾರಣೆಗೆ ಕರೆದಾಗ ಯಾಕೆ ಸುಮ್ಮನಿದ್ರಿ; ಬಿಜೆಪಿ ಪ್ರಶ್ನೆ

ಬೆಂಗಳೂರು; ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಜಾಣ ಮೌನವಹಿಸಿದ್ದೇಕೆ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.  ಮುಖ್ಯಮಂತ್ರಿ ಪದವಿಯ ಪ್ರಬಲ ಆಕಾಂಕ್ಷಿಯನ್ನು ತೆರೆಮರೆಗೆ ಸರಿಸುವ ಹುನ್ನಾರ ಇದರ ಹಿಂದೆ ಇತ್ತೇ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಬಿಜೆಪಿ ಮಾಡಿರುವ ಸರಣಿ ಟ್ವೀಟ್‌ಗಳಲ್ಲೇನಿದೆ..?

ಖರ್ಗೆಯವರನ್ನು #ED ತನಿಖೆ ಮಾಡುವಾಗ ಸಿದ್ದರಾಮಯ್ಯ ಹಾಗೂ ಡಿಕೆಶಿ ಜಾಣ ಮೌನವಹಿಸಿದ್ದರು. ಸಿಎಂ ಪದವಿಯ ಪ್ರಬಲ ಆಕಾಂಕ್ಷಿಯನ್ನು ತೆರೆಮರೆಗೆ ಸರಿಸುವ ಹುನ್ನಾರವಿತ್ತೇ?

 

ಮಾನ್ಯ @PriyankKharge, #IndiaWithRahulGandhi ಎಂದೆನ್ನುವ ಮುನ್ನ ನಿಮ್ಮ ತಂದೆಯನ್ನು #ED ತನಿಖೆ ಮಾಡುವಾಗ ಕಾಂಗ್ರೆಸ್ ನಿಮ್ಮ ಕುಟುಂಬದ ಪರವಾಗಿ ನಿಲ್ಲಲಿಲ್ಲವೇಕೆ ಎಂದು ಎಂದಾದರೂ ಯೋಚಿಸಿದ್ದೀರಾ? ನೀವ್ಯಾಕೆ ಅಂದು ತಂದೆಯ ಪರವಾಗಿ ಧ್ವನಿ ಎತ್ತಿಲ್ಲ? ಜನ್ಮದಾತನಿಗಿಂತ ನಕಲಿ ಗಾಂಧಿಗಳು ಹೆಚ್ಚಾದರೇ?

Share Post