ಮಹಿಳೆಗೆ ಚಾಕುವಿನಿಂದ ಇರಿದು ಆಕೆ ಮಗಳನ್ನು ಹೊತ್ತೊಯ್ದ ಆರೋಪಿ
ಧಾರವಾಡ; ಪೋಕ್ಸೋ ಕೇಸ್ನಲ್ಲಿ ಜೈಲು ಸೇರಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕೇಸ್ ದಾಖಲಿಸಿದ್ದ ಮಹಿಳೆಗೆ ಚಾಕುವಿನಿಂದ ಇರಿದಿದ್ದಾನೆ. ಸಾಲದೆಂಬಂತೆ ಆಕೆಯ ಅಪ್ರಾಪ್ತ ಮಗಳನ್ನು ಹೊತ್ತೊಯ್ದಿದ್ದಾನೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪರಶುರಾಮ್ ಲಮಾಣಿ ಕಳೆದ ವರ್ಷ ಪೋಕ್ಸೋ ಕೇಸ್ನಲ್ಲಿ ಜೈಲು ಸೇರಿದ್ದ. ಏಪ್ರಿಲ್ನಲ್ಲಿ ಜಾಮೀನಿನ ಮೇಲೆ ಆತ ಹೊರ ಬಂದಿದ್ದ. ಶುಕ್ರವಾರ ರಾತ್ರಿ ಪರಶುರಾಮ್ ತನ್ನ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಜೀಜಾಬಾಯಿಗೆ ಚಾಕುವಿನಿಂದ ಇರಿದಿದ್ದಾನೆ.