International

ದ.ಆಫ್ರಿಕಾದಲ್ಲಿ ಭ್ರಷ್ಟಾಚಾರ; ಗುಪ್ತ ಸಹೋದರರ ಅರೆಸ್ಟ್‌

ಅಬುಧಾಬಿ;  ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಭಾರತೀಯ ಮೂಲದ ಉದ್ಯಮಿಗಳಾದ ಗುಪ್ತಾ ಸಹೋದರರನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಬಂಧಿಸಲಾಗಿದೆ.

ಯುಎಇನಲ್ಲಿ ಕಾನೂನು ಜಾರಿ ಅಧಿಕಾರಿಗಳು ಗುಪ್ತಾ ಕುಟುಂಬದ ರಾಜೇಶ್ ಗುಪ್ತಾ ಮತ್ತು ಅತುಲ್ ಗುಪ್ತಾ ಅವರನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ತಿಳಿಸಿದೆ. ಗುಪ್ತಾ ಸಹೋದರರು 24 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ದಕ್ಷಿಣ ಆಫ್ರಿಕಾಗೆ ಹೋಗಿದ್ದರು. ಅವರ ವ್ಯಾಪಾರ ನಿಧಾನವಾಗಿ  ಬೆಳೆದು ದಕ್ಷಿಣ ಆಫ್ರಿಕಾದ 10 ಶ್ರೀಮಂತ ವ್ಯಾಪಾರಿ ಕುಟುಂಬಗಳಲ್ಲಿ ಒಂದಾಗಿತ್ತು.

ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಅವರನ್ನು ರಾಜಕೀಯ ಹಾಗೂ ವ್ಯಾಪಾರ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಜುಮಾ ಅವರು ಅಧಿಕಾರದಲ್ಲಿದ್ದಾಗ 2009 ರಿಂದ 2018 ರವರೆಗೆ ಗುಪ್ತಾ ಸಹೋದರರು ದಿ ನ್ಯೂ ಏಜ್(ಟಿಎನ್‌ಎ) ಪತ್ರಿಕೆಗಾಗಿ ಅಪಾರ ಪ್ರಮಾಣದ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Share Post