ಹೈದರಾಬಾದ್ನಲ್ಲಿ ಮತ್ತೊಂದು ಪೈಶಾಚಿಕತೆ; ಬೆಂಜ್ ಕಾರಲ್ಲಿ ಸಾಮೂಹಿಕ ಅತ್ಯಾಚಾರ
ಹೈದರಾಬಾದ್; ತೆಲಂಗಾಣ ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಯುವಕರ ಗುಂಪೊ೦ದು ಅಪ್ರಾಪ್ತ ಬಾಲಕಿ ಮೇಲೆ ಬೆಂಜ್ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದೆ.
ಹೈದರಾಬಾದ್ನ ಜೂಬಿಲಿ ಹಿಲ್ಸ್ ಏರಿಯಾದಲ್ಲಿ ಈ ಕೃತ್ಯ ಎಸಗಲಾಗಿದೆ. ಅಪ್ರಾಪ್ತ ಬಾಲಕಿ ಪಬ್ ಒಂದಕ್ಕೆ ಹೋಗಿದ್ದಳು. ಪಬ್ನಲ್ಲಿ ಪಾರ್ಟಿ ಮುಗಿಸಿ ಆಕೆ ಮನೆಗೆ ಹೊರಟಿದ್ದಳು. ಈ ವೇಳೆ ಪಾರ್ಟಿಗೆ ಬಂದಿದ್ದ ಕೆಲ ಯುವಕರು, ಬೆಂಜ್ ಕಾರಿನಲ್ಲಿ ಮನೆಗೆ ಡ್ರಾಪ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದಕ್ಕೆ ಒಪ್ಪಿದ ಬಾಲಕಿ ಕಾರಿನಲ್ಲಿ ಕುಳಿತಿದ್ದಾಳೆ. ಯುವಕರು ಆಕೆಯನ್ನು ಮನೆಗೆ ಬಿಡದೇ ಜ್ಯೂಬಿಲಿ ಹಿಲ್ಸ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಲವಂತವಾಗಿ ಆಕೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.