National

ತನ್ನನ್ನ ತಾನೇ ಮದುವೆಯಾಗ್ತಾಳಂತೆ ಈ ಯುವತಿ..!!

ವಡೋದರಾ; ಇತ್ತೀಚೆಗೆ ಜನರು ವಿಚಿತ್ರವಾಗಿ ವರ್ತಿಸೋದಕ್ಕೆ ಶುರು ಮಾಡಿದ್ದಾರೆ. ಒಂದೇ ಲಿಂಗದವರು ಮದುವೆಯಾಗೋದು. ತಮ್ಮನ್ನು ತಾವೇ ಇಷ್ಟಪಡೋದು. ಹೀಗೆ ಏನೇನೋ ಮಾಡ್ತಾರೆ. ಇದೇ ರೀತಿ ಇಲ್ಲೊಂದು ಯುವತಿ ಆಕೆಯನ್ನು ಆಕೆಯೇ ಮದುವೆಯಾಗ್ತಿದ್ದಾಳಂತೆ. 

ಇತ್ತೀಚಿನ ದಿನಗಳಲ್ಲಿ ವೈವಾಹಿಕ ಬಂಧನಕ್ಕೊಳಗಾಗದೇ ಒಂಟಿಯಾಗಿ ಜೀವನ ನಡೆಸುವ ಟ್ರೆಂಡ್​ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದರ ಮುಂದುವರೆದ  ವಿದೇಶದಲ್ಲಿ ಇಂತಹ ಪ್ರಕರಣ ಈಗಾಗಲೇ ಕಂಡು ಬಂದಿವೆ. ಆದರೆ, ಮೊಟ್ಟಮೊದಲ ಸಲ ಭಾರತದಲ್ಲೊಂದು ಸೆಲ್ಫ್‌ ಮ್ಯಾರೇಜ್‌ ಪ್ರಕರಣ ಗುಜರಾತ್​​ನಲ್ಲಿ ಬೆಳಕಿಗೆ ಬಂದಿದೆ.

   24 ವರ್ಷದ ಯುವತಿಯೊಬ್ಬಳು ಜೂನ್ 11ರಂದು ಸ್ವಯಂ ಮದುವೆ ಮಾಡಿಕೊಳ್ಳಲಿದ್ದಾಳಂತೆ. ಇದಕ್ಕೋಸ್ಕರ ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ಇಂತಹ ಪ್ರಕರಣ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು ಎಂದು ವರದಿಯಾಗಿದೆ.

ಜೂನ್ 11ರಂದು ವಡೋದರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಯುವತಿ ತನ್ನೊಂದಿಗೆ ಮದುವೆ ಮಾಡಿಕೊಳ್ಳಲಿದ್ದಾಳೆ. ವಿಶೇಷವೆಂದರೆ ಆರತಕ್ಷತೆ, ಮೆಹಂದಿ ಸೇರಿದಂತೆ ತಾಳಿ ಕಟ್ಟುವ ಮುಹೂರ್ತ ಸಹ ನಡೆಯಲಿದೆ. ಈ ವೇಳೆ ಯುವತಿ ತನ್ನಷ್ಟಕ್ಕೆ ತಾನೇ ಮಾಂಗಲ್ಯ ಕಟ್ಟಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಎರಡು ವಾರಗಳ ಕಾಲ ಹನಿಮೂನ್​​ಗೆ ತೆರಳಲಿದ್ದಾಳಂತೆ.

Share Post