ಗಂಡನ ಮನೆಯವರ ಕಿರುಕುಳ; 6 ಮಕ್ಕಳನ್ನು ಬಾವಿಗೆಸೆದ ತಾಯಿ..!!
ಮುಂಬೈ; ಗಂಡನ ಮನೆಯವರ ಚಿತ್ರಹಿಂಸೆ ತಾಳಲಾರದೆ ಮಹಾರಾಷ್ಟರದಲ್ಲಿ ಹೆತ್ತ ತಾಯಿಯೇ ಆರು ಮಕ್ಕಳನ್ನು ಬಾವಿಗೆ ಎಸೆದು ಸಾಯಿಸಿದ್ದಾಳೆ. 30 ವರ್ಷದ ಮಹಿಳೆಗೆ ಆಕೆಯ ಗಂಡನ ಮನೆಯವರು ತೀವ್ರವಾಗಿ ಕಾಡುತ್ತಿದ್ದಂತೆ. ಇದರಿಂದ ಮನನೊಂದು ಆಕೆ, ತನ್ನ ಆರೂ ಮಕ್ಕಳನ್ನೂ ಬಾವಿಗೆ ಎಸೆದು ಸಾಯಿಸಿದ್ದಾಳೆ. ಮಹಿಳೆ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ರಕ್ಷಿಸಲಾಗಿದೆ.
ನೀರಿನಲ್ಲಿ ಮುಳುಗಿ ಮೃತಪಟ್ಟ ಎಲ್ಲಾ ಮಕ್ಕಳು 18 ತಿಂಗಳಿಂದ 10 ವರ್ಷದೊಳಗಿನವರಾಗಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.