KGF-2 ಸಿನಿಮಾ ಪ್ರಭಾವ; ಹತ್ತು ಸಿಗರೇಟ್ ಸೇದಿ ಅಸ್ವಸ್ಥಗೊಂಡ ತೆಲಂಗಾಣ ಬಾಲಕ..!
ಹೈದರಾಬಾದ್; ಕೆಜಿಎಫ್-೨ ಸಿನಿಮಾದಲ್ಲಿ ನಾಯಕ ನಟ ಯಶ್ ಸಿಗರೇಟ್ ಸೇದುವ ದೃಶ್ಯವನ್ನು ನೋಡಿದ್ದೀರಿ. ತೆಲಂಗಾಣದ ಬಾಲಕನೊಬ್ಬ ಕೆಜಿಎಫ್‌ನಲ್ಲಿ ಯಶ್ ನಟನೆಯಿಂದ ಪ್ರಭಾವಿತನಾಗಿ ಒಂದರಿಂದೊಂದರಂತೆ ಒಂದು ಪಾಕೆಟ್ ಸಿಗರೇಟ್ ಸೇದಿದ್ದಾನೆ. ಇದರಿಂದ ಆತ ಅಸ್ವಸ್ಥಗೊಂಡಿದ್ದು, ಪೋಷಕರು ಸಕಲಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಕೆ.ಜಿ.ಎಫ್ ಚಾಪ್ಟರ್–2 ಸಿನಿಮಾವನ್ನು ಬಾಲಕ ಮೂರು ಬಾರಿ ನೋಡಿ, ನಾಯಕ ನಟ ಯಶ್‌ರಿಂದ ಪ್ರಭಾವಿತನಾಗಿದ್ದ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಅಸ್ವಸ್ಥಗೊಂಡ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯಶಸ್ವಿ ಚಿಕಿತ್ಸೆ ಬಳಿಕ ಆತ ಚೇತರಿಸಿಕೊಂಡಿದ್ದಾನೆ. ಸಿನಿಮಾದಲ್ಲಿ ನಾಯಕನ ಪ್ರಭಾವದಿಂದಾಗಿ ಬಾಲಕ ಸಿಗರೇಟ್ ಸೇದಿದ್ದಾನೆ. ನಂತರ ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಾಲಕನಿಗೆ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಜನೆ ನೀಡಲಾಗಿದ್ದು ಬಾಲಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ವಾಸಕೋಶ ತಜ್ಞ ಡಾ.ರೋಹಿತ್ ರೆಡ್ಡಿ ಪಥೂರಿ, ಸಿನಿಮಾಗಳು ನಮ್ಮ ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಸಿಗರೇಟು ಸೇದುವುದು, ತಂಬಾಕು ಜಗಿಯುವುದು, ಮದ್ಯಪಾನದಂತಹ ದೃಶ್ಯಗಳನ್ನು ವೈಭವೀಕರಿಸಬಾರದು. ಆದ್ದರಿಂದ ಸಿನಿಮಾ ನಟರು, ಚಿತ್ರ ನಿರ್ಮಾಪಕರು ಇಂತಹ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.