ಬೆಂಗಳೂರಲ್ಲಿ ರಾತ್ರಿ ಯಾವ ಏರಿಯಾದಲ್ಲಿ ಎಷ್ಟು ಮಳೆಯಾಗಿದೆ..?
ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಿನಲ್ಲಿ ನೂರು ಮಿಲಿ ಮೀಟರ್ಗೂ ಹೆಚ್ಚು ಮಳೆಯಾಗಿದೆ. ಇದ್ರಿಂದಾಗಿ ಹಲವು ಕಡೆ ರಸ್ತೆಗಳೇ ಕೊಚ್ಚಿಹೋಗಿವೆ. ಕೆಲವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಹೊರಮಾವಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಅಲ್ಲಿ 155 ಸೆಂಟಿಮೀಟರ್ ಮಳೆಯಾಗಿದೆ. ಹಾಗಾದ್ರೆ, ಬೆಂಗಳೂರಲ್ಲಿ ರಾತ್ರಿ ಎಲ್ಲೆಲ್ಲಿ ಎಂದು ಮಿಲಿ ಮೀಟರ್ ಮಳೆಯಾಗಿದೆ..? ಇಲ್ಲಿದೆ ಮಾಹಿತಿ.
ಹೊರಮಾವು – 155 ಮಿಮೀ
ಯಲಹಂಕ – 129 ಮಿಮೀ
ವಿದ್ಯಾಪೀಠ – 127 ಮಿಮೀ
ರಾಜಮಹಲ್ ಗುಟ್ಟಹಳ್ಳಿ – 122 ಮಿಮೀ
ನಾಗಪುರ – 120 ಮಿಮೀ
ಸಂಪಂಗಿರಾಮನಗರ – 119 ಮಿಮೀ
ದಾಸರಹಳ್ಳಿ – 110 ಮಿಮೀ
ವಿದ್ಯಾರಣ್ಯಪುರ – 109 ಮಿಮೀ
ದೊಡ್ಡನೆಕ್ಕುಂದಿ – 108 ಮಿಮೀ
ಬಾಣಸವಾಡಿ – 106 ಮಿಮೀ
ಜಕ್ಕೂರು – 102 ಮಿಮೀ
ಸಿಂಗಸಂದ್ರ – 98 ಮಿಮೀ
ವನ್ನಾರ್ ಪೇಟೆ – 85 ಮಿಮೀ
ವಿವಿಪುರಂ – 82 ಮಿಮೀ
ಕೋರಮಂಗಲ – 80 ಮಿಮೀ
ಚಾಮರಾಜಪೇಟೆ – 79 ಮಿಮೀ
ದೊಮ್ಮಲೂರು – 79 ಮಿಮೀ
ಎಚ್.ಎ.ಎಲ್, ಬಿಟಿಎಂ ಬಡಾವಣೆ – 77 ಮಿಮೀ
ನಾಯಂಡಹಳ್ಳಿ – 73 ಮಿಮೀ
ಬೆಳ್ಳಂದೂರು – 66 ಮಿಮೀ
ಬಿಳೇಕಳ್ಳಲ್ಲಿ – 65 ಮಿಮೀ
ಮಾರತ್ಹಳ್ಳಿ, ಸಾರಕ್ಕಿ – 61 ಮಿಮೀ
ವರ್ತೂರು – 59 ಮಿಮೀ
ಜ್ಞಾನಭಾರತಿ – 53 ಮಿಮೀ
ಕೋಣನಕುಂಟೆ – 44 ಮಿಮೀ
ಕೆಂಗೇರಿ – 37 ಮಿಮೀ