ಅಮೆರಿಕದಲ್ಲಿ ಯುವಕನಿಂದ ಗುಂಡಿನ ದಾಳಿ; ಹತ್ತು ಮಂದಿ ಬಲಿ
ವಾಷಿಂಗ್ಟನ್; ಅಮೆರಿಕದಲ್ಲಿ ಆಗಾಗ ವ್ಯಕ್ತಿಗಳು ವಿನಾಕಾರಣ ಗುಂಡಿನ ದಾಳಿ ನಡೆಸುವುದನ್ನು ನೋಡುತ್ತಲೇ ಇರುತ್ತೇವೆ. ಇವತ್ತೂ ಕೂಡಾ ಅಂತದ್ದೇ ಒಂದು ಕೃತ್ಯಕ್ಕೆ ಹತ್ತು ಮಂದಿ ಬಲಿಯಾಗಿದ್ದಾರೆ.
ಅಮೆರಿಕ ನ್ಯೂಯಾರ್ಕ್ ಬಫೆಲೋ ಸೂಪರ್ ಮಾರ್ಕೆಟ್ ದಿನಸಿ ಮಳಿಗೆಯೊಂದರಲ್ಲಿ 18 ವರ್ಷದ ಯುವಕನೊಬ್ಬ ಇದ್ದಕ್ಕಿಂತೆ ಅಲ್ಲಿನ ಗ್ರಾಹಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈತನ ಗುಂಡಿನ ದಾಳಿಯಿಂದಾಗಿ ಹತ್ತು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಳೆದ 48 ಗಂಟೆಯಲ್ಲಿ ಅಮೆರಿಕದ ಎರಡು ಕಡೆ ಗುಂಡಿನ ದಾಳಿ ನಡೆದಿದ್ದು, ಇದು ಜನಾಂಗೀಯ ಪ್ರೇರಿತ ದಾಳಿ ಎಂಬುದು ಸ್ಪಷ್ಟವಾಗಿದೆ. ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದಲ್ಲದೆ, ಕೃತ್ಯವನ್ನು ತನ್ನ ಕ್ಯಾಮೆರಾ ಮೂಲಕ ನೇರಪ್ರಸಾರ ಮಾಡಿದ್ದಾನೆ. ಸೇನಾ ಸಾಧನಗಳನ್ನು ಧರಿಸಿ ಬಿಳಿ ವರ್ಣೀಯ ದಾಳಿಕೋರನನ್ನು ಹತ್ಯಾಕಾಂಡದ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಜೋಸೆಫ್ ಗ್ರಾಮಾಗ್ಲಿಯಾ ಹೇಳಿದ್ದಾರೆ.