ತಾಜ್ ಮಹಲ್ ಜಾಗ ಯಾರಿಗೆ ಸೇರಿದ್ದಂತೆ ಗೊತ್ತಾ..?; ಆ ರಾಜಕುಮಾರಿ ಹತ್ರ ದಾಖಲೆ ಇದೆಯಾ..?
ಜೈಪುರ; ಪ್ರಪಂಚ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಈಗ ಚರ್ಚೆಯ ವಿಷಯವಾಗಿದೆ. ತಾಜ್ಮಹಲ್ನಲ್ಲಿ ಮುಚ್ಚಿರುವ ಕೊಠಡಿಗಳನ್ನು ತೆರೆಯಬೇಕೆಂದು ಆಗ್ರಹಿಸಿ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿಯೂ ಸಲ್ಲಿಕೆಯಾಗಿದೆ. ಈ ನಡುವೆ ಜೈಪುರ ರಾಜವಂಶಸ್ಥೆ ಹಾಗೂ ಸವಾಯಿ ಮಾಧೋಪುರ ಕ್ಷೇತ್ರದ ಬಿಜೆಪಿ ಸಂಸದೆ ದಿಯಾ ಕುಮಾರಿ ನೀಡಿರುವ ಹೇಳಿಕೆ ಚರ್ಚಗೆ ಗ್ರಾಸವಾಗಿದೆ.
ಜೈಪುರದಲ್ಲಿ ಮಾತನಾಡಿರುವ ಅವರು, ತಾಜ್ ಮಹಲ್ ಇರುವ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದಾಗಿದೆ. ಅದನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾಗಿದೆ. ಈ ಭೂಮಿಯಲ್ಲಿ ಮೊದಲು ಅರಮನೆ ಇತ್ತು, ಷಹಜಹಾನ್ ಈ ಭೂಮಿಯನ್ನು ಇಷ್ಟಪಟ್ಟಾಗ, ಅದನ್ನು ಮಹಾರಾಜರಿಂದ ಪಡೆದುಕೊಂಡರು. ಜೈಪುರ ರಾಜಮನೆತನದ ಪುಸ್ತಕಗಳಲ್ಲಿ ಭೂಮಿಗೆ ಸಂಬಂಧಿಸಿದ ದಾಖಲೆಗಳಿವೆ. ಕೋರ್ಟ್ ಹೇಳಿದರೆ ಅವುಗಳನ್ನು ಹಾಜರುಪಡಿಸುತ್ತೇವೆ ಎಂದಿದ್ದಾರೆ.