ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತುಂಬು ಗರ್ಬಿಣಿ ಅನುಮಾನಾಸ್ಪದ ಸಾವು
ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಪಟ್ಟಣದ ಆಜಾದ್ ನಗರದಲ್ಲಿ ತುಂಬು ಗರ್ಬಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಗಂಡನ ವಿರುದ್ಧ ಅನುಮಾನ ವ್ಯಕ್ತಪಡಿಸಲಾಗಿದೆ.
ಎಂಟು ತಿಂಗಳ ಗರ್ಬಿಣಿ ಮಿಸ್ಬಾ ಕೌಸರ್ (22) ಮೃತಪಟ್ಟವರು. ಕಳೆದ ವರ್ಷವಷ್ಟೇ ಶಿಡ್ಲಘಟ್ಟ ಪಟ್ಟಣದ ಗಾಂಧೀನಗರದ ನಿವಾಸಿಯಾಗಿದ್ದ ಮಿಸ್ಬಾ ಕೌಸರ್‌ಗೆ ಅಸಿಫ್ ಪಾಷಾ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಬುಧವಾರ ತಡರಾತ್ರಿ ಗಂಡನ ಮನೆಯಲ್ಲಿ ಮಿಸ್ಬಾ ಕೌಸರ್ ಮೃತಪಟ್ಟಿದ್ದಾರೆ. ವೇಲ್‍ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮಿಸ್ಬಾ ಅವರ ಮೃತದೇಹ ಪತ್ತೆಯಾಗಿದೆ. ಮಿಸ್ಬಾ ಕೌಸರ್ ಪೋಷಕರು ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.