Bengaluru

ಯುವತಿಗೆ ಆಸಿಡ್‌ ಹಾಕಿದ ಪ್ರಕರಣ; ಯುವತಿ ಸ್ಥಿತಿ ಈಗ ಹೇಗಿದೆ..?

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ಪಾಗಲ್‌ ಪ್ರೇಮಿಯಿಂದ ಆಸಿಡ್‌ ದಾಳಿಗೊಳಗಾಗಿರುವ ಯುವತಿಯ ದೇಹ ಶೇಕಡಾ 40-50ರಷ್ಟು ಸುಟ್ಟಿದೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ. ಆ್ಯಸಿಡ್ ಅಟ್ಯಾಕ್ ಆಗಿ ಯುವತಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ರು. ಸುಟ್ಟ ಗಾಯದ ಕಂಟೆಂಟ್ ಚೆಕ್ ಮಾಡುತ್ತಿದ್ದೇವೆ. ಇನ್ನೂ ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಕರೆತಂದಾಗ ಯುವತಿಗೆ ಬಿಪಿ ಲೋ ಇತ್ತು. ಕೂಡಲೇ ಯುವತಿಗೆ ಚಿಕಿತ್ಸೆ ನೀಡಲಾಗಿದ್ದು, ಸ್ವಲ್ಪ ಸುಧಾರಣೆ ಕಂಡಿದೆ.  ತುರ್ತು ಚಿಕಿತ್ಸೆ ಏನು ಮಾಡಬೇಕೋ ಅದನ್ನು ಮಾಡಲಾಗಿದೆ. ಅನಂತರ ಪೋಷಕರ ಒತ್ತಾಯದ ಮೇರೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share Post