National

ಹಿಂದಿಯಲ್ಲೂ ದಾಖಲೆ ಬರೆದ ಕೆಜಿಎಫ್‌-2; ಇದುವರೆಗೂ ಗಳಿಸಿದ್ದೆಷ್ಟು..?

ಮುಂಬೈ; ಹಿಂದಿ ಭಾಷೆಯಲ್ಲಿ ಕೆಜಿಎಫ್‌-2 ದಾಖಲೆ ಬರೆದಿದೆ. ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌–2 ಹಿಂದಿ ಅವತರಣಿಕೆ ಇದುವರೆಗೆ ಬರೋಬ್ಬರಿ 343.13 ಕೋಟಿ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಹಿಂದಿ ಭಾಷೆಯಲ್ಲಿ ಅತಿಹೆಚ್ಚು ಸಂಪಾದನೆ ಕಂಡ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್‌-2 ಪಾತ್ರವಾಗಿದೆ.

ಈ ಕುರಿತು ಸಿನಿಮಾ ಉದ್ಯಮ ವಿಶ್ಲೇಷಕ ತಾರಕ್‌ ಆದರ್ಶ್‌ ಎನ್ನುವವರು ಟ್ವೀಟ್‌ ಮಾಡಿದ್ದು, ಟೈಗರ್ ಜಿಂದಾ ಹೈ, ಪಿಕೆ, ಸಂಜು ಸಿನಿಮಾಗಳನ್ನು ಕೆಜಿಎಫ್‌–2 ಹಿಂದಿಕ್ಕಿದೆ. ಇದೀಗ ಅತಿಹೆಚ್ಚು ಗಳಿಕೆ ಕಂಡ ಹಿಂದಿಯ ಮೂರನೇ ಸಿನಿಮಾ ಎನಿಸಿದೆ ಎಂದಿದ್ದಾರೆ. ಸಲ್ಮಾನ್‌ ಖಾನ್‌ ಅಭಿನಯದ ಟೈಗರ್ ಜಿಂದಾ ಹೈ 339.16 ಕೋಟಿ, ಅಮೀರ್‌ ಖಾನ್‌ ನಟನೆಯ ‘ಪಿಕೆ’ 340.8 ಕೋಟಿ, ರಣಬೀರ್‌ ಕಪೂರ್‌ರ ಸಂಜು 342.53 ಕೋಟಿ ಗಳಿಕೆ ಮಾಡಿದ್ದವು.

Share Post