ಐಪಿಎಸ್ ಅಧಿಕಾರಿ ಸಹೋದರನ ವಿರುದ್ಧ ದೂರು
ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ.ಚೆನ್ನಣ್ಣನವರ್ ಸಹೋದರ ರಾಘವೇಂದ್ರ ಡಿ.ಚನ್ನಣ್ಣನವರ್ ವಿರುದ್ಧ ಅವರ ಹೆಂಡತಿ ರೋಜಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದಾರೆ. ಅಲ್ಲದೆ, ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರಲೂ ತೀರ್ಮಾನಿಸಿದ್ದಾರೆ.
2016ರಲ್ಲಿ ರಾಘವೇಂದ್ರ ಡಿ.ಚನ್ನಣ್ಣನವರ್ ರನ್ನು ರೋಜಾ ಮದುವೆಯಾಗಿದ್ದರಂತೆ. ಆದರೆ ರಾಘವೇಂದ್ರ ಅವರು ಮತ್ತೊಂದು ಮಹಿಳೆಯ ಜೊತೆಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಮದುವೆಯಾದ ಒಂದು ವರ್ಷದಲ್ಲೇ ನನ್ನಿಂದ ದೂರವಾಗಿದ್ದಾರೆ ಎಂದು ರೋಜಾ ಆರೋಪಿಸಿದ್ದಾರೆ.
ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಹಲವು ಬಾರಿ ಹಣ ಪಡೆದು ಬೆದರಿಕೆ ಹಾಕಲಾಗಿದೆ ಎಂದು ರೋಜಾರ ತಂದೆ ಲೋಕೇಶ್ ದೂರಿದ್ದಾರೆ. ಇದರ ವಿರುದ್ಧ ಈಗ ಸಿಟಿ ಸಿವಿಲ್ ಕೋರ್ಟ್ಗೆ ಹೋಗಿ ಪ್ರಕರಣ ದಾಖಲಿಸಿದ್ದೇವೆ. ಇದೇ ತಿಂಗಳ 30ರಂದು ವಿಚಾರಣೆ ನಡೆಸುವುದಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ತಿಳಿಸಿದೆ ಎಂದು ಅವರು ಹೇಳಿದರು.