Bengaluru

ಶಾಲೆಯಲ್ಲಿ ಬೈಬಲ್‌ ಕಡ್ಡಾಯಗೊಳಿಸಿದ ಆರೋಪ; ಕ್ಲಾರೆನ್ಸ್‌ ಪ್ರೌಢಶಾಲೆಗೆ ನೋಟಿಸ್‌

ಬೆಂಗಳೂರು: ರಿಚರ್ಡ್ಸ್‌ ಟೌನ್‌ನ ಕ್ಲಾರೆನ್ಸ್‌ ಪ್ರೌಢಶಾಲೆಯಲ್ಲಿ ಬೈಬಲ್‌ ಅಧ್ಯಯನ ಕಡ್ಡಾಯಗೊಳಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ ಶಾಲೆಗೆ ನೋಟಿಸ್‌ ಜಾರಿ ಮಾಡಿದೆ. ಈ ಬಗ್ಗೆ ವಿವರಣೆ ನೀಡುವಂತೆ ಕ್ಲಾರೆನ್ಸ್‌ ಪ್ರೌಢಶಾಲೆಗೆ ಸೂಚನೆ ನೀಡಿದೆ. ಮಾಧ್ಯಮಗಳ ವರದಿ ಮತ್ತು ಪೊಷಕರ ದೂರುಗಳನ್ನು ಆಧರಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ನೋಟಿಸ್‌ ನೀಡಿದೆ.

ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಕ್ಲಾರೆನ್ಸ್‌ ಶಾಲೆಯ ನಡೆ ರಾಜ್ಯ ಶಿಕ್ಷಣ ನೀತಿಯ ಉಲ್ಲಂಘನೆಯಾಗಿದೆ. ಬೇರೆ ಬೋರ್ಡ್‌ ಶಾಲೆಗಳಿಗೆ ನಿರಾಕ್ಷೇಪಣ ಪತ್ರವನ್ನು ನೀಡುವ ಮೊದಲು ಕಾಯಿದೆಯ ನಿಬಂಧನೆಗಳಿಗೆ ಒಳಪಟ್ಟಿರಬೇಕೆಂದು ಒತ್ತಿಹೇಳುತ್ತೇವೆ. ಧಾರ್ಮಿಕ ಪುಸ್ತಕಗಳನ್ನು ಬೋಧನೆ ಮಾಡಲು ಪ್ರತ್ಯೇಕ ನಿಬಂಧನೆಗಳಿಲ್ಲ. ಇದೆಲ್ಲವೂ ನಿರಾಕ್ಷೇಪಣ ಪತ್ರದಲ್ಲಿ ಉಲ್ಲೇಖಗೊಂಡಿರುತ್ತದೆ ಎಂದಿದ್ದಾರೆ.

Share Post