ಹೋಟೆಲ್ & ಫರ್ನಿಚರ್ ಮಳಿಗೆ ಬೆಂಕಿಗಾಹುತಿ; ಮಣಿಪಾಲದಲ್ಲಿ ಲಕ್ಷಾಂತರ ರೂ. ನಷ್ಟ
ಉಡುಪಿ: ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ ಲಕ್ಷ್ಮೀಂದ್ರ ನಗರದಲ್ಲಿರುವ ಫರ್ನಿಚರ್ ಮಳಿಗೆ ಹಾಗೂ ಹೋಟೆಲ್ ಬೆಂಕಿಗೆ ಆಹುತಿಯಾಗಿದೆ. ಹೋಟೆಲ್ ಹಾಗೂ ಮಳಿಗೆ ಬಹುತೇಕ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಸಂಕೀರ್ಣಕ್ಕೆ ವ್ಯಾಪಿಸಿದೆ. ಪಕ್ಕದಲ್ಲೇ ಇದ್ದ ಸುಧಾ ಫರ್ನಿಚರ್ ಮಳಿಗೆ ಕೂಡಾ ಪೂರ್ತಿಯಾಗಿ ಬೆಂಕಿಗೆ ಆಹುತಿಯಾಗಿದೆ. ಸುದ್ದಿ ತಿಳಿದ ಕೂಡಾ ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಹೋಟೆಲ್ ಹಾಗೂ ಫರ್ನಿಚರ್ ಮಳಿಗೆ ಬೆಂಕಿಗೆ ಆಹುತಿಯಾಗಿವೆ.