National

ಭರವಸೆ ಈಡೇರಿಸಿದ ಆಮ್‌ ಆದ್ಮಿ; ಪಂಜಾಬ್‌ನಲ್ಲಿ ತಿಂಗಳಿಗೆ 300 ಯೂನಿಟ್‌ ವಿದ್ಯುತ್‌ ಉಚಿತ

ನವದೆಹಲಿ: ಚುನಾವಣೆ ಸಮಯದಲ್ಲಿ ಆಮ್‌ ಆದ್ಮಿ ಪಾರ್ಟಿ ತಿಂಗಳಿಗೆ 300 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಘೊಷಣೆ ಮಾಡಿತ್ತು. ಅದನ್ನು ಈಗ ಈಡೇರಿಸಿದೆ. ಪಂಜಾಬ್‌ನಲ್ಲಿ ಜುಲೈ 1ರಿಂದ ಗೃಹ ಬಳಕೆಗಾಗಿ 300 ಯೂನಿಟ್‌ಗಳ ಉಚಿತ ವಿದ್ಯುತ್‌ ಪೂರೈಸುವುದಾಗಿ ಮುಖ್ಯಮಂತ್ರಿ ಭಗವಂತ ಮಾನ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ (ಎಎಪಿ)ದ ಸರ್ಕಾರ ಘೋಷಣೆ ಮಾಡಿದೆ.

ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದು 30 ದಿನ ಪೂರೈಸಿರುವ ಎಎಪಿ ಸರ್ಕಾರ ಇಂದು ಈ ಮಹತ್ವದ ಘೋಷಣೆ ಮಾಡಿದೆ. ಚುನಾವಣೆಯಲ್ಲಿ ಎಎಪಿ ನೀಡಿದ್ದ ಪ್ರಮುಖ ಆಶ್ವಾಸನೆಗಳಲ್ಲಿ ಉಚಿತ ವಿದ್ಯುತ್‌ ಕೂಡ ಒಂದಾಗಿತ್ತು. ಬಹುತೇಕ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಎಎಪಿ ಸರ್ಕಾರ ಜಾಹೀರಾತು ನೀಡಿದ್ದು, ಉಚಿತ ವಿದ್ಯುತ್ ಘೋಷಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನೂ ಜಾಹೀರಾತಿನಲ್ಲಿ ಎತ್ತಿತೋರಿಸಲಾಗಿದೆ.

Share Post