ಬ್ಯಾಂಕ್‌ನಲ್ಲಿ ಕುಳಿತಲ್ಲಿಯೇ ಮಹಿಳಾ ಉದ್ಯೋಗಿ ಸಾವು!
ಲಖನೌ(ಉತ್ತರಪ್ರದೇಶ); ಬ್ಯಾಂಕ್ ಒಂದರ ಮಹಿಳಾ ಉದ್ಯೋಗಿ ಕೆಲಸ ಮಾಡುತ್ತಿರುವಾಗ ಕುಳಿತಲ್ಲಿಯೇ ಸಾವನ್ನಪ್ಪಿದ್ದಾರೆ.. ಲಖನೌನ ಗೋಮ್ಟಿನಗರದ ವಿಭೂತಿ ಖಂಡ್ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ..
ಸದಾಫ್ ಫಾತಿಮಾ ಎಂಬ ಬ್ಯಾಂಕ್ ಮಹಿಳಾ ಉದ್ಯೋಗಿಯೇ ಸಾವನ್ನಪ್ಪಿದವರು.. ಕೆಲಸದ ಅತಿಯಾದ ಒತ್ತಡದಿಂದಲೇ ಸದಾಫ್ ಫಾತಿಮಾ ಸಾವನ್ನಪ್ಪಿದ್ದಾರೆ ಎಂದು ಸಹೋದ್ಯೋಗಿಯೊಬ್ಬರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಆರೋಪ ಮಾಡಿದ್ದಾರೆ.. ಸೆಪ್ಟೆಂಬರ್ 24ರಂದು ಸದಾಫ್ ಫಾತಿಮಾ ಅವರು ಕೆಲಸದ ವೇಳೆಯಲ್ಲಿ ಕಚೇರಿಯಲ್ಲಿ ಕುರ್ಚಿಯಿಂದ ಕುಸಿದುಬಿದ್ದಿದ್ದರು.. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.. ಆದ್ರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ..