ಬಾಂಗ್ಲಾ ಪ್ರಧಾನಿ ಹಸೀನಾ ಶೇಖ್ ಇಸ್ಲಾಂ ಮೂಲಭೂತವಾದಿಗಳ ತಾಯಿ; ಲೇಖಕಿ ತಸ್ಲಿಮಾ ನಸ್ರೀನ್
ಬೆಂಗಳೂರು: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇಸ್ಲಾಂ ಮೂಲಭೂತವಾದಿಗಳ ತಾಯಿ ಎಂದು ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್ ಕಿಡಿ ಕಾರಿದ್ದಾರೆ. ಇಸ್ಲಾಂ ಧರ್ಮಕ್ಕೆ ಮತ್ತು ಪ್ರವಾದಿ ಮಹಮದ್‌ಗೆ ಅಗೌರವ ತೋರಿದ್ದಾರೆಂದು ಶಿಕ್ಷಕರೊಬ್ಬರನ್ನು ಬಂಧಿಸಿರುವುದನ್ನು ವಿರೋಧಿಸಿ ತಸ್ಲಿಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.
ಬಾಂಗ್ಲಾದೇಶವೂ ಇಸ್ಲಾಮಿಕ್ ರಾಷ್ಟ್ರವಾಗುತ್ತಿದೆ. ಖುರಾನ್ ವೈಜ್ಞಾನಿಕ ತಳಹದಿಯದ್ದಾಗಿದೆ ಮತ್ತು ಪ್ರವಾದಿ ಮಹಮದ್ ವಿಶ್ವದ ದೊಡ್ಡ ವಿಜ್ಞಾನಿ ಎಂಬುದನ್ನು ಒಪ್ಪಿಕೊಳ್ಳದ ವಿಜ್ಞಾನ ಶಿಕ್ಷಕನನ್ನು ಬಾಂಗ್ಲಾದೇಶದಲ್ಲಿ ಜೈಲಿಗೆ ಕಳುಹಿಸಲಾಗಿದೆ. ಎಲ್ಲಾ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹಸೀನಾ ತಾಯಿಯಾಗಿದ್ದಾರೆ ಎಂದು ತಸ್ಲಿಮಾ ಅವರು ಟ್ವೀಟ್ ಮಾಡಿದ್ದಾರೆ.