ಪಕ್ಕದ ಮನೆಯ ಅಪ್ರಾಪ್ತೆ ಮೇಲೆ ಇಬ್ಬರು ಸಹೋದರರ ಅತ್ಯಾಚಾರ; 28 ವರ್ಷಗಳ ನಂತರ ಬಯಲು
ಶಹಜಹಾನ್ಪುರ: ಪಕ್ಕದ ಮನೆಯ ಅಣ್ಣ-ತಮ್ಮಂದಿರಿಬ್ಬರು ಎರಡು ವರ್ಷಗಳ ಕಾಲ ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಈ ವಿಷಯ 28 ವರ್ಷಗಳ ಬಳಿಕ ಬಯಲಾಗಿದೆ. ಡಿಎಸ್ಎ ಟೆಸ್ಟ್ನಲ್ಲೂ ಸಾಬೀತಾಗಿದೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ.
ಶಹಜಹಾನ್ಪುರದಲ್ಲಿ 1994ರಿಂದ 1996ರ ನಡುವೆ ಪಕ್ಕದ ಮನೆಯ ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಲಾಗಿತ್ತು. ಸಹೋದರರಿಬ್ಬರು ಆಕೆ ಮೇಲೆ ಅತ್ಯಾಚರ ಎಸಗಿದ್ದರು. ಹೀಗಾಗಿ ಆಕೆ ಗರ್ಭಿಣಿಯಾಗಿ, ಗಂಡು ಮಗುವಿಗೆ ಜನ್ಮವನ್ನೂ ನೀಡಿದ್ದಳು. ಆದ್ರೆ ಆರೋಪಿಗಳು ಬೆದರಿಕೆ ಹಾಕಿದ್ದರಿಂದ ಸಂತ್ರಸ್ತೆ ದೂರು ಕೊಡದೇ ಸುಮ್ಮನಾಗಿದ್ದಳು. ಅನಂತರ ದಂಪತಿಯೊಬ್ಬರು ಆ ಮಗುವನ್ನು ದತ್ತು ತೆಗೆದುಕೊಂಡು ಹೋಗಿದ್ದರು.
ಇದಾದ ಕೆಲ ವರ್ಷಗಳ ನಂತರ ತಾಯಿ ತನ್ನ ಮಗನನ್ನು ಭೇಟಿಯಾಗಿದ್ದಾಳೆ. ನಡೆದ ಘಟನೆಯನ್ನು ಆತನಿಗೆ ವಿವರಿಸಿದ್ದಾಳೆ. ಆಗ ಮಗ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾನೆ. ಮಗ ಹೇಳಿದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳ ಡಿಎನ್ಎ ಪರೀಕ್ಷೆ ಮಾಡಿಸಿದ್ದರು. ಸಹೋದರರಲ್ಲಿ ಒಬ್ಬನ ಡಿಎನ್ಎ ಮ್ಯಾಚ್ ಆಗಿದ್ದು, ಸಂತ್ರಸ್ತೆಯ ಮಗನ ತಂದೆ ಆತನೇ ಎಂದು ಸಾಬೀತಾಗಿದೆ.