InternationalNational

ಬಹುಮೊತ್ತಕ್ಕೆ ಹರಾಜಾದ ಟಿಪ್ಪು ವಿಜಯದ ವರ್ಣಚಿತ್ರ: ಯುದ್ಧ ಸನ್ನಿವೇಶಗಳ ಚಿತ್ರಣ

ಲಂಡನ್:‌  1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಸುಲ್ತಾನ್ ವಿಜಯ ಸಾಧಿಸಿದ್ದರ ಗುರುತಾಗಿ ವರ್ಣಚಿತ್ರವನ್ನು ಬಿಡಿಸಿದ್ದರು. ಆ ಪಟ್ಕಕೆ ಇದೀಗ ಭಾರಿ ಬೇಡಿಕೆ ಬಂದಿದೆ.  ಆಂಗ್ಲೋ-ಮೈಸೂರು ಯುದ್ಧವು 242 ವರ್ಷಗಳ ಹಿಂದೆ ಸೆಪ್ಟೆಂಬರ್ 10 ರಂದು ನಡೆಯಿತು. ಇದನ್ನು ‘ಪೊಲ್ಲಿಲೂರ್ ಕದನ’ ಎಂದು ಕರೆಯಲಾಗುತ್ತದೆ. ಟಿಪ್ಪು ಸುಲ್ತಾನ್ ಈ ಯುದ್ಧದಲ್ಲಿ ತನ್ನ ವಿಜಯದ ಸ್ಮರಣಾರ್ಥವಾಗಿ ವರ್ಣಚಿತ್ರವನ್ನು ಬಿಡಿಸಿದನು.

32 ಅಡಿ ಉದ್ದದ ಈ ಪೇಂಟಿಂಗ್ಅನ್ನು ಲಂಡನ್ ನ ಸದಾಬೀಸ್ ಹರಾಜು ಹೌಸ್ ನಲ್ಲಿ ಹರಾಜಿಗೆ ಇಡಲಾಗಿತ್ತು. ವಿಶ್ವ ಹಾಗೂ ಭಾರತ ಮಟ್ಟದಲ್ಲಿ ವಿಶೇಷ ಆಕರ್ಷಣೆಯಾದ ಈ  ಚಿತ್ರ ಬರೋಬ್ಬರಿ ರೂ. 6.27 ಕೋಟಿ (ಲಕ್ಷ 6.30 ಲಕ್ಷ). ಹರಾಜಾಗಿದೆ.

ಈ ಪೇಂಟಿಂಗ್ ನಲ್ಲಿ ಯುದ್ಧದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಬಿಡಿಸಲಾಗಿದೆ. ಇದು ನಿಸ್ಸಂದೇಹವಾಗಿ ಉಳಿದಿರುವ ವಸಾಹತುಶಾಹಿ ಸೋಲಿನ ಕುರಿತಾದ ಶ್ರೇಷ್ಠ ಭಾರತೀಯ ವರ್ಣಚಿತ್ರವಾಗಿದೆ. ಇದು ಒಂದು ಅನನ್ಯ ಮತ್ತು ಅದ್ಭುತವಾದ ಕಲಾಕೃತಿಯಾಗಿದೆ ಎಂದು ಸೋಥೆಬಿಯ ತಜ್ಞ, ದಿ ಅನಾರ್ಕಿ: ದಿ ರಿಲೇಟಿವ್ ರೈಸ್ ಆಫ್ ದಿ ಈಸ್ಟ್ ಇಂಡಿಯಾ ಕಂಪನಿಯ ಲೇಖಕ ವಿಲಿಯಂ ಡಾಲ್ರಿಂಪಲ್ ಹೇಳಿದರು.

ಈಸ್ಟ್ ಇಂಡಿಯಾ ಕಂಪನಿ ಎದುರಿಸಿದ ಅತ್ಯಂತ ಪ್ರಭಾವಿ ಎದುರಾಳಿ ಟಿಪ್ಪು ಸುಲ್ತಾನ್. ಭಾರತೀಯರು ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ಹೋರಾಡಿ, ಭಾರತದಲ್ಲಿ ಯುರೋಪಿಯನ್ ಸೈನ್ಯವನ್ನು ಸೋಲಿಸುವುದು ಈ ಪೊಲ್ಲಿಲೂರ್ ಯುದ್ಧದಲ್ಲಿ ಮೊದಲು.

Share Post